ಇಂಡಿ: ರಾಣಿ ಚನ್ನಮ್ಮಳ ಜೀವನವು ಧೈರ್ಯ ದೇಶಭಕ್ತಿಯ ಪ್ರತೀಕ. ಕಿತ್ತೂರು ರಾಣಿ ಚನ್ನಮ್ಮಳ ಜೀವನವು ಧೈರ್ಯ ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ಅವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದರು.ಅವರು ಇಂಡಿ ನಗರದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ 247 ನೇ ಜಯಂತಿ ಹಾಗೂ ವಿಜಯಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವಿ ಎಚ್ ಬಿರಾದಾರ, ನಿವೃತ್ತ ಪ್ರೌಢಶಾಲೆ ಸಹ ಶಿಕ್ಷಕರಾದ ಆರ್ ಬಿ ಬಿರಾದಾರ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಹಿಕ್ಕನಗುತ್ತಿ ಲಿಂಗಾಯತ ಮಾಹಾಮಠದ ಪೂಜ್ಯ ಶ್ರೀ ಪ್ರಭುಲಿಂಗ ಶರಣರು ಆರ್ಶಿವಚನ ನೀಡಿ ಕನ್ನಡ ನಾಡನ್ನಾಳಿದ, ತನ್ನ ಚಿಕ್ಕ ಸಂಸ್ಥಾನವನ್ನು ಬ್ರಿಟಿಷರಿಗೆ ಬಿಟ್ಟುಕೊಡದೆ ಸೆಣಸಿದ ಧೀಮಂತ ಮಹಿಳೆ ರಾಣಿಚನ್ನಮ್ಮಳು ಇಂದಿನ ಯುವ ಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾಳೆ. ಅವರ ಸಾಹಸ ಮತ್ತು ನಾಯಕತ್ವವು ಎಲ್ಲರಿಗೂ ಪ್ರೇರಣೆಯಾಗಿದೆ ಕಿತ್ತೂರು ರಾಣಿ ಚನ್ನಮ್ಮ ಎಂದರೆ ಧೈರ್ಯ ಸಾಹಸ ಸ್ವಾಭಿಮಾನದ ಸಂಕೇತ ದೇಶಪ್ರೇಮದ ಪ್ರತೀಕ ಸ್ವಾಭಿಮಾನಿ ಸೈನಿಕರನ್ನು ಒಗ್ಗೂಡಿಸಿ ಸ್ವತಂತ್ರ ರಾಜ್ಯಕ್ಕಾಗಿ ಛಲಬಿಡದೆ ಹೋರಾಡಿದ ವೀರವನಿತೆ ಅವಳಾಗಿದ್ದಾಳೆ ಎಂದು ಹೇಳಿದರು.
ಸಂದರ್ಭದಲ್ಲಿ ಇಂಡಿ ತಾಲೂಕು ದಂಡಾಧಿಕಾರಿ ಎಸ್ ಬಿ ಕಡಕಬಾವಿ, ಗ್ರೇಡ್ -2 ತಹಶೀಲ್ದಾರ ಧನಪಾಲ್ ಶೆಟ್ಟಿ ದೇವೂರ, ಮಾದೇವಪ್ಪ ಏವೂರ ಆರ್ ಬಿ ಗದ್ಯಾಳ ಇಂಡಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಪ್ ರಾಠೋಡ, ಇಂಡಿ ಶಿಕ್ಷಣಾಧಿಕಾರಿ ಸೈಯಿದಾ ಅನಿಸಾ ಮುಜಾವರ ಇಂಡಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾವೂರ ಇಂಡಿ ತಾಲೂಕು ಪಂಚಮಸಾಲಿ ಸಂಘದ ಕಾರ್ಯದರ್ಶಿ ಶಿವಾನಂದ ಚಾಳಿಕಾರ ರಾಮಸಿಂಗ್ ಕನ್ನೊಳ್ಳಿ ಸುಧಾಕರಗೌಡ ಬಿರಾದಾರ ಪ್ರಭು ಹೊಸಮನಿ ಅನೀಲಗೌಡ ಬಿರಾದಾರ ಆರ್ ಬಿ ಪಾಟೀಲ ಶರಣಗೌಡ ಬಂಡಿ ಬಾಳು ಮುಳಜಿ ಶಿವಾನಂದ ದೇವರ ಹಾಗೂ ಕಂದಾಯ ಇಲಾಖೆಯ ಸಂತೋಷ ಹೊಟಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಇಸಿಓ ಎ ಸಿ ಹುಣಸಗಿ ಅವರು ನಿರೂಪಿಸಿದರು.