ವಿಜಯಪುರ : ಜಿಲ್ಲೆಯಲ್ಲಿ 29 ಸಾಮಾನ್ಯ ಮತಗಟ್ಟೆ ಇದ್ದು, 15 ಸೂಕ್ಷ್ಮ ಮತಗಟ್ಟೆಗಳು, 3 ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು 17 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ ಎಂದು ನಗರದಲ್ಲಿ ಎಸ್ಪಿ ಎಚ್.ಡಿ. ಆನಂದಕುಮಾರ ಹೇಳಿದರು. 6 ಮತಗಟ್ಟೆಗಳಿಗೆ ವಿಡಿಯೋ ಗ್ರಾಫರ್ ಗಳನ್ನು ನೇಮಕ ಮಾಡಲಾಗಿದೆ.
ಒಟ್ಟು 47 ಮತಗಟ್ಟೆಗಳಿಗೆ ಡಿವೈಎಸ್ ಪಿ-3, ಸಿಪಿಐ- 11, ಪಿಎಸ್ ಐ -16, ಎಎಸ್ ಐ -18, ಸಿಎಚ್ ಸಿ- 80, ಸಿಪಿಸಿ- 193, ಡಿಎಆರ್ ತುಕುಡಿ- 12 ಹಾಗೂ ಕೆಎಸ್ ಆರ್ ಪಿ ತುಕುಡಿ – 3 ನೇಮಿಸಲಾಗಿದೆ ಎಂದರು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಎಲ್ಲ ಸಾಮಗ್ರಿಗಳನ್ನು ಬೆಳಗಾವಿಯ ಜ್ಯೋತಿ ಕಾಲೇಜ್ ಕ್ಲಬ್ ರಸ್ತೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗುವುದು ಎಂದರು.