ಕಾಡಂಚಿನ ನೆಲ್ಲಿಕತ್ರಿ ಗ್ರಾಮಕ್ಕೆ ಶಾಸಕ ಎಂಆರ್ ಮಂಜುನಾಥ್ ಭೇಟಿ
ಹನೂರು:ತಾಲ್ಲೂಕಿನ ಕಾಡಂಚಿನ ನೆಲ್ಲಿಕತ್ರಿ ಗ್ರಾಮಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿಮಾಡಿ ಗ್ರಾಮದ ಸಮಸ್ಯೆ ಆಲಿಸಿ ಜನರಿಗೆ ಅಗತ್ಯವಾಗಿ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯ ಬಗ್ಗೆ ಮಾಹಿತಿ ಪಡೆದರು.
ಆದಿವಾಸಿ ಬುಡಕಟ್ಟು ಸೋಲಿಗ ಸಮುದಾಯ ಜನರಿರುವ ನೆಲ್ಲಿಕತ್ರಿ ಗ್ರಾಮದಲ್ಲಿ ರಸ್ತೆ ಕುಡಿಯುವ ನೀರು ಕರೆಂಟ್ ವಸತಿಮನೆ ಅಂಗನವಾಡಿ ಕೇಂದ್ರ ನಿರ್ಮಾಣ ಇನ್ನಿತರ ಬೇಡಿಕೆಗಳನ್ನು ಜನರಿಂದ ಶಾಸಕರು ನಿರೀಕ್ಷಿಸಿದರು.
ಬಳಿ ಮಾತನಾಡಿ ರಸ್ತೆ ನಿರ್ಮಿಸಲು ಈಗಾಗಲೇ ಅನುಮತಿ ಕೇಳಲಾಗಿದೆ. ಅನುಮತಿ ದೊರೆತ ಕೂಡಲೆ ಮುಂದಿನ ದಿನಗಳಲ್ಲಿ ರಸ್ತೆಯನ್ನು ನಿರ್ಮಿಸಿ ನಿಮ್ಮೆಲ್ಲರಿಗೂ ಓಡಾಡಲು ಉತ್ತಮ ರಸ್ತೆ ಮತ್ತು ಇತರ ಅನುಕೂಲ ಕಲ್ಪಿಸಲಾಗುವುದು ಎಂದರು.
ಅಲ್ಲದೆ ಜಲ ಜೀವನ್ ಮೀಷನ್ ಯೋಜನೆಯಡಿ ಪ್ರತಿಯೊಂದು ಮನೆ ಮನೆಗೆ ಕುಡಿಯುವ ನೀರಿನ ಯೋಜನೆಯ ಕಾಮಾಗಾರಿಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದರ ಮೂಲಕ ದಿನದ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಎಂದು ತಿಳಿಸಿದರು
ಅದಲ್ಲದೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮಹತ್ವದ ಯೋಜನೆಯಾದ ಉಚಿತ ಮನೆ ನೀಡುವ ಸಂಬಂಧ ಪ್ರತಿ ಮನೆಗೂ ಬೇಟಿ ನೀಡಿ ಅರ್ಹರಿಗೆ ಮನೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರಿಗೂ ಸೂರಿನ ಅನುಕೂಲ ಕಲ್ಪಿಸಲು ಉದ್ದೇಶ ಹೊಂದಲಾಗಿದೆ. ಎಂದರು
ಈಗಾಗಲೇ ನೆಲ್ಲಿಕತ್ರಿ ಗ್ರಾಮಕ್ಕೆ ಅಂಗನವಾಡಿ ಕೇಂದ್ರಕೆ ನಿರ್ಮಿಸಲು ಸ್ಥಳವನ್ನು ಗುರುತ್ತಿಸಿದೆ. ಇದರ ಕೆಲಸವನ್ನು ಸಹ ಪ್ರಾರಂಭಿಸಲಾಗಿದೆ. ಅದರಿಂದ ಕಾಡಂಚಿನ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಮುಂದಿನ ದಿನಗಳಲ್ಲಿ ನೆಲ್ಲಿಕತ್ರಿ ಗ್ರಾಮಕ್ಕೆ ವಿದ್ಯುತ್ ಸಮಸ್ಯೆಯನ್ನು ಸಹ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಜೀರಿಗೆಗದ್ದೆ ಗ್ರಾಮದಲ್ಲಿ ಹೆಜ್ಜೇನು ಕಡಿದು ಸಾವನ್ನಾಪ್ಪಿದ ಮಾದೇಶ್ (50 ) ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ಧನ ಸಹಾಯ ನೀಡಿದರು.
ಈ ವೇಳೆ ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್ ಬೈಲೂರು ಗ್ರಾಮ ಪಂಚಾಯಿತಿ ಸದಸ್ಯ ಮಹಾದೇವಸ್ವಾಮಿ ಮುಖಂಡರಾದ ಜಡೇರುದ್ರಸ್ವಾಮಿ ಪಾಳ್ಯ ಗೋಪಾಲ್ ನಾಯಕ ಪೊನ್ನಾಚ್ಚಿ ಡಿ.ಕೆ. ರಾಜು ಸಿದ್ದರಾಜು ಗೋವಿಂದ ವಿಜಯ್ ಕುಮಾರ್ ಸೋಮಣ್ಣ ನೆಲ್ಲಿಕತ್ರಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು .
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ