ವೈಯಕ್ತಿಕವಾಗಿ ಗ್ರಾಮಕ್ಕೆ ಉಚಿತ ಬೋರ್ ವೆಲ್ ಕೊರೆಸಿಕೊಟ್ಟ ಶಾಸಕ ಎಂಆರ್ ಮಂಜುನಾಥ್
ಹನೂರು: ತಾಲ್ಲೂಕಿನ ಮಣಗಳ್ಳಿಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುಗಳ ದೊಡ್ಡಿ ಗ್ರಾಮದ ಉರಿ ಲಿಂಗ ಸ್ವಾಮಿ ಶಾಖಾ ಮಠಕ್ಕೆ ಇಂದು ಉರಿ ಲಿಂಗ ಜ್ಞಾನ ಪ್ರಕಾಶ್ ಸ್ವಾಮಿ ಗಳ ಸಮ್ಮುಖದಲ್ಲಿ ಬೋರ್ ವೆಲ್ ಕೋರಿಸಿದ ಶಾಸಕ ಎಂ.ಆರ್ ಮಂಜುನಾಥ್ ರವರಿಂದ ವೈಯಕ್ತಿಕ ಬೋರ್ ವೆಲ್ ಕೊರಿಸಿ ಈ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಿದಕ್ಕೆ ಗ್ರಾಮಸ್ಥರಿಂದ ಶ್ಲಾಘನೀಯ ವ್ಯಕ್ತ ಪಡಿಸಿದರು.
ಹನೂರು: ತಾಲ್ಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುಗಳ ದೊಡ್ಡಿ ಗ್ರಾಮದಲ್ಲಿ ಶ್ರೀ ಉರಿಲಿಂಗಿ ಪೆದ್ದಿಮಠದ ಶಾಖಾ ಮಠದ ಮಣಗಳ್ಳಿ ಶಿವಾನಂದ ಸ್ವಾಮಿ ಮಠದ ಜಮೀನಿನಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಗಂಗಾ ಪೂಜೆ ಹಾಗೂ ಕೊಳವೆ ಬಾವಿ ಕೊರೆಯುವ ಯಂತ್ರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಎಂ.ಆರ್.ಮಂಜುನಾಥ್ ರಾಜ್ಯ ದೇಶದ ಅನೇಕ ಮಠ ಮಾನ್ಯಗಳು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿವೆ ಈ ದಿಸೆಯಲ್ಲಿ ಹನೂರು ಭಾಗದಲ್ಲಿ ಉರಿಲಿಂಗಿ ಪೆದ್ದಿಮಠದ ಶಾಖಾ ಮಠವು ಜನರ ಒಳಿತಿಗೆ ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದರು.
ಈ ಸಂದರ್ಭದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮಿಜಿ, ಮುಡುಕುತೊರೆ ಸಿದ್ಧರಾಮ ಶಿವಯೋಗಿಸ್ವಾಮಿ, ಬೆಳಕವಾಡಿ ಮಲ್ಲಪ್ಪ ಸ್ವಾಮಿಗಳು, ಹನೂರು ಹನೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಪ.ಪಂ.ಮಾಜಿ ಸದಸ್ಯ ಬಸವರಾಜು, ಮುಖಂಡರುಗಳಾದ ರಾಜು, ತಮ್ಮಯ್ಯ ಗೌಡ, ಶಿವರಾಮ ಗೌಡ, ಯಜಮಾನ ಮಹಾದೇವ,ಅಮಸ್ವಾಮಿ,ಮಾದೇವ, ಮಹಾದೇವ್ ಬುದ್ಧ , ಲೋಕೇಶ್ ರಾವಣ, ವೆಂಕಟೇಶ್, ಅತಿಕ್, ಇನ್ನಿತರರು ಉಪಸ್ಥಿತರಿದ್ದರು.