ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂಆರ್ ಮಂಜುನಾಥ್
ಹನೂರು : ತಾಲೂಕಿನ ಅಂಬಿಕಪುರ ಗ್ರಾಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರು ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಶಾಸಕ ಎಂ.ಆರ್ ಮಂಜುನಾಥ್ ಅವರು ಮಾತನಾಡಿ, ಹನೂರು ಪಟ್ಟಣದಿಂದ ಅಂಬಿಕಾಪುರ ರಾಮಾಪುರ ಮಾರ್ಗವಾಗಿ ಗರಿಕೆ ಖಂಡಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಗಿತ್ತು ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ ಸರ್ಕಾರದಿಂದ 10 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯ ಸಹ ಮುಗಿದಿದೆ . ಹೀಗಾಗಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಬೇಗ ಕಾಮಗಾರಿಯನ್ನು ಮುಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ರಮೇಶ್ , ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮಹೇಶ್ , ಚಿನ್ನನ್, ರಾಮಕೃಷ್ಣ,ಮುಖಂಡರುಗಳಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರನಾಯಕ, ಅಜ್ಜೀಪುರ ಗ್ರಾ. ಪಂ ಅಧ್ಯಕ್ಷ ರುದ್ರ ನಾಯಕ್, ಸೂಳೇರಪಾಳ್ಯ ಗ್ರಾ. ಪಂ ಅಧ್ಯಕ್ಷರು ಮುತ್ತುರಾಜು,ಚಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಛಲವಾದಿ ತಾ. ಅಧ್ಯಕ್ಷ ಬಸವರಾಜು, ರೈತ ಸಂಘದ ತಾ. ಅಧ್ಯಕ್ಷ ಅಮ್ಜದ್ ಖಾನ್, , ಸದ್ಯಸರಾದ,ರಾಜೇಂದ್ರ , ರಾಚಪ್ಪ, ಲೋಕೇಶ್, ಮಂಜೇಶ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ,ಜೆಸ್ಸಿಂ,ಮುಖಂಡರು,ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.