ಬೂದು ನೀರು ನಿರ್ವಹಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂಆರ್ ಮಂಜುನಾಥ್
ಹನೂರು: ಸಾರ್ವಜನಿಕ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ನಾಗರಿಕರು ಸಹಕರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು
ಕಲುಷಿತ ಚರಂಡಿ ಮತ್ತು ಮಳೆಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಕೆರೆ ಕಟ್ಟೆ ಜಲಮೂಲಗಳಿಗೆ ನೀರನ್ನು ಸರಬರಾಜು ಮಾಡಲು ಬೂದು ನೀರು ನಿರ್ವಹಣೆ ಯೋಜನೆ ಉಪಯುಕ್ತವಾದದ್ದು ಎಂದು ತಿಳಿಸಿದರು.
ತಾಲ್ಲೂಕಿನ ಹೂಗ್ಯ, ರಾಮಪುರ, ಕೌದಳ್ಳಿ ಗ್ರಾಮಗಳಲ್ಲಿ ಜಿ.ಪಂ.ಚಾಮರಾಜನಗರ, ತಾ.ಪಂ.ಹನೂರು ವತಿಯಿಂದ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬೂದು ನೀರು ನಿರ್ವಹಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಗ್ರಾಮಗಳಲ್ಲಿ ಶುಚಿತ್ವ, ಆರೋಗ್ಯ ಕಾಪಾಡುವುದರ ಜೊತೆಗೆ ವ್ಯರ್ಥವಾಗುವ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಈ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಶ್ಲಾಘನೀಯ ವಿಚಾರ. ಹೂಗ್ಯ ಜಲ್ಲಿಪಾಳ್ಯ ಮುಖ್ಯ ರಸ್ತೆಯಲ್ಲಿ ತಲೆದೂರಿದ್ದ ಸಮಸ್ಯೆ ನಿವಾರಣೆ ಜೊತೆಗೆ ವಿವಿಧಡೆ ತಲೆದೂರಿದ್ದ ಸಮಸ್ಯೆಗೆ ಬೂದು ನೀರು ನಿರ್ವಹಣೆ ಕಾರ್ಯಕ್ರಮದಡಿ 1.64 ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದೇ ರೀತಿ ರಾಮಾಪುರ, ಕೌದಳ್ಳಿ ಗ್ರಾಮಗಳಲ್ಲಿಯೂ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಗ್ರಾ.ಪಂ.ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರು ಈ ಯೋಜನೆಯನ್ನು ಫಲಪ್ರದವಾಗಲು ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಮಹಾದೇವ ಪ್ರಸಾದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಉಮೇಶ್, ಎಡಿ ರವೀಂದ್ರ, ಪಿಡಿಒ ಪುಷ್ಪಲತಾ, ಗ್ರಾ.ಪಂ.ಅಧ್ಯಕ್ಷೆ ಮುರುಗೇಶ್ವರಿ ರಾಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ , ಉಪಾಧ್ಯಕ್ಷೆ ರಾಜಮ್ಮ, ಸದಸ್ಯರುಗಳಾದ ಚಿಕ್ಕಯ್ಯ, ವೀರೇಶ್, ಪಳನಿಸ್ವಾಮಿ,ರಾಜಣ್ಣ, ರಾಜ,ರವಿಕುಮಾರ್, ಸುಬ್ಬಮ್ಮ, ಪೆರುಮಾಳ್, ಮುಖಂಡರುಗಳಾದ ಮಂಜೇಶ್ ಗೌಡ,ಯರಂಬಾಡಿ ಹುಚ್ಚಯ್ಯ, ಮಾಣಿಕ್ಯ, ಮುನಿಯಪ್ಪ, ಅರುಳ್ ಸ್ವಾಮಿ, ಶ್ರೀರಂಗಂ, ವೆಂಕಟರಾಮ,ಸುಬ್ರಮಣಿ, ಹನೂರು ಮಂಜೇಶ್, ಮಹದೇವ್, ಅತಿಕ್ ನಭಿ ,ರಾಚಪ್ಪ, ಕೆಂಪಲಿಂಗ, ಬಾಬು, ಸಾರ್ವಜನಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಚೇತನ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ