ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಪರಿಶೀಲಿಸಿದ ಶಾಸಕ ಎಂ ಆರ್ ಮಂಜುನಾಥ್
ಹನೂರು: ಸಮುದಾಯ ಭವನದ ಮುಂದುವರೆದ ಕಾಮಗಾರಿ ಹಾಗೂ ಅಡುಗೆ ಮನೆ ಸುಸರ್ಜಿತವಾಗಿ ನಿರ್ಮಾಣ ಮಾಡುವಂತೆ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿರುವ ಅಂಬೇಡ್ಕರ್ ಸಮುದಾಯ ಭವನವನ್ನು ಪರಿಶೀಲಿಸಿ ಭವನದ ಮುಂದುವರೆದ ಕಾಮಗಾರಿ ಮತ್ತು ನೂತನ ಅಡುಗೆಮನೆ ಕೊಠಡಿ ಕಾಮಗಾರಿಗೆ 2012_13ಸಾಲಿನ ಪರಿಶಿಷ್ಟ ಜಾತಿ ಭವನಗಳ ಅನುದಾನದಡಿ ಅಂದಾಜು 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸೂಚನೆ ನೀಡಿದರು
ಅಂಬೇಡ್ಕರ್ ಸಮುದಾಯ ಭವನದ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಮುಂದುವರೆದ ಕಾಮಗಾರಿ ಮತ್ತು ನೂತನ ಅಡುಗೆ ಮನೆ ಕೊಟ್ಟಡಿ ಕಾಮಗಾರಿಯನ್ನು ಯಾವುದೇ ಲೋಪದೋಷಗಳು ಇಲ್ಲದಂತೆ ನಿರ್ಮಾಣ ಮಾಡಿಕೊಳ್ಳುವಂತೆ ಸಲಹೆ ನೀಡಿದರು ಇದೇ ಸಂದರ್ಭದಲ್ಲಿ.
ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರ ಜೆ.ಇ ರವಿ ,ಹಾಗೂ ಮುಖಂಡರುಗಳಾದ ಕಾಮಗೆರೆ ಚಿನ್ನಸ್ವಾಮಿ, ಜೆಸೀಮ್ ಪಾಷಾ,ಎಸ್.ಆರ್ ಮಹಾದೇವ್,ಡಿಕೆ ರಾಜು, ಕಾಮಗೆರೆ ಶಿವು,ಚನ್ನಲಿಂಗಣ ಹಳ್ಳಿ ವೆಂಕಟೇಶ್, ಮುಂತಾದವರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ