ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಗನ್ ಮ್ಯಾನ್ ನನ್ನು ಕಲಬುರಗಿ ನಗರದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಫಜಲ್ಪುರ ಮತ ಕ್ಷೇತ್ರದ ಶಾಸಕ ಎಮ್.ವಾಯ್ ಪಾಟೀಲರ ಗನ್ ಮ್ಯಾನ್ ಆಗಿದ್ದ ಹಯ್ಯಾಳಿ ದೇಸಾಯಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಕೋಟಾದಡಿ ಹಯ್ಯಾಳಿ ದೇಸಾಯಿ ಪರೀಕ್ಷೆ ಬರೆದಿದ್ದ. ಅಲ್ಲದೆ ಓಎಂಆರ್ ಸೀಟ್ ತಿದ್ದಿ 200 ಅಂಕಗಳಿಗೆ 138 ಅಂಕ ಪಡೆದು ದೇಸಾಯಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ. ಅಕ್ರಮವಾಗಿ ಪರೀಕ್ಷೆ ಬರೆದಿರುವ ಆರೋಪದಡಿ ಸಿಐಡಿ ಪೊಲೀಸರು ಹಯ್ಯಾಳಿ ದೇಸಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: