ಇಂಡಿ : ಹಲವು ವರ್ಷಗಳಿಂದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕಾಗಿ ಹಿರಿಯರು ಹೋರಾಟ ಮಾಡಿದ್ದಾರೆ. ಅದರ ಫಲುವಾಗಿ ಕೇಂದ್ರ ಸರಕಾರ ರಾಷ್ಟ್ರಪತಿ ಅಂಕಿತಗೊಳಿಸಿ ಎರಡು ವರ್ಷಗಳ ಹಿಂದಯೇ ಪತ್ರದ ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಕಾಲಹರಣ ಮಾಡಿ, ನಮ್ಮ ಸಮುದಾಯಕ್ಕೆ ಭರವಸೆ ನೀಡಿದೆ ವಿನಃ ಪ್ರಮಾಣ ಪತ್ರ ಮರಿಚಿಕೆಯಾಗಿದೆ ಎಂದು ತಾಲ್ಲೂಕು ತಳವಾರ ಪರಿವಾರ ಸಮಾಜದ ಕಾರ್ಯದರ್ಶಿ ಹುಚ್ಚಪ್ಪ ತಳವಾರ ಮತ್ತು ಸಮುದಾಯ ಹಿರಿಯ ವ್ಯಕ್ತಿ ಭೀಮಣ್ಣ ಕೌಲಗಿ ಜಂಟಿ ಸುದ್ದಗೊಷ್ಠಿಯಲ್ಲಿ ಹೇಳಿದರು.
ಇಂಡಿ ಪಟ್ಟಣದ ತಳವಾರ ಸಮುದಾಯ ಭವನದಲ್ಲಿ ಸುದ್ದಗೊಷ್ಠಿ ಉದ್ದೇಶಿಸಿ ಮಾತಾನಾಡಿದ ಅವರು, ನಮ್ಮ ಸಮುದಾಯದ ಮುಖಂಡ ಮಾಜಿ ಶಾಸಕ ಶರಣಪ್ಪ ಸುಣಗಾರ ಮತ್ತು ಶಿವಾಜಿ ಮೇಟಗಾರ ನೇತೃತ್ವದಲ್ಲಿ ಏಪ್ರಿಲ್ ೧೮ ಕ್ಕೆ ಸರಕಾರದ ವಿರುದ್ಧ ಬೃಹತ್ ಪ್ರಮಾಣದ ಹೋರಾಟ ಸಿಂದಗಿ ಪಟ್ಟಣದಲ್ಲಿ ಕಾಡು ವೇಶ ಧರಸಿ ಜೊತೆಗೆ ಅರಬೆತ್ತಲೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇಂಡಿ ತಾಲ್ಲೂಕಿನಿಂದ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಸಂಖ್ಯೆ ಭಾಗವಹಿಸುತ್ತೆವೆ. ಎಲ್ಲಿಯವರೆಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಕೊಡುವುದಿಲ್ಲವೋ ಹಾಗೇ ಪ್ರತಿ ತಾಲ್ಲೂಕಿನಲ್ಲಿಯೂ ಬೃಹತ್ ಮಟ್ಟದ ಪ್ರತಿಭಟನೆ ನಡೆಯುತ್ತೆದೆ. ಸಿಂದಗಿ ಪಟ್ಟಣದ ಮುಗಿದ ನಂತರ ಇಂಡಿ ತಾಲ್ಲೂಕಿನಲ್ಲಿ ಆಯೋಜನೆಗೋಳಿಸಲಾ – ಗುತ್ತೆದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕುಂಬಾರ, ಮರಾಠ, ದಲಿತ ಸಮಾಜ ಮುಖಂಡರು ಸತೀಶ ಕುಂಬಾರ, ಆನಂದ ಪವಾರ ಮತ್ತು ಶಿವಾನಂದ ಮೂರಮನ ಮಾತಾನಾಡಿದ ಅವರು, ಈ ಸಮುದಾಯ ಹಲವು ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ಸಮುದಾಯ ಸಮಾಜದಲ್ಲಿ ಹಲವು ವಿಷಯಗಳಿಂದ ಕುಂಟಿತಗೊಂಡಿರುತ್ತೋ ಅಂತಹ ಸಮುದಾಯಕ್ಕೆ ಮೇಲುತ್ತುವ ಕೆಲಸ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಾಡಿದೆ. ಆದರೆ ಇಲ್ಲಿಯವರೆಗೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಪ್ರಮಾಣ ಪತ್ರ ಕೊಡಬೇಕು. ಒಂದು ವೇಳೆ ಕೆಟ್ಟ ಚಾಳಿ ಮುಂದುವರೆಸಿದ್ರೆ ನಾವು ನಮ್ಮ ಸಮುದಾಯದಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.