ಮಿನಿವಿಧಾನಸೌಧ ಹಾಗೂ ನ್ಯಾಯಾಲಯದ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂಆರ್ ಮಂಜುನಾಥ್
ಹನೂರು: ತಾಲೂಕಿನ ಹುಲ್ಲೇಪುರ ಹಾಗೂ ಮಂಗಲ ಗ್ರಾಮದ ಸರ್ಕಾರಿ ಜಮೀನು ಸ್ಥಳಕ್ಕೆ ಶಾಸಕ ಎಂಆರ್ ಮಂಜುನಾಥ್ ರವರು ಭೇಟಿ ನೀಡಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಹಸಿಲ್ದಾರ್ ಗುರುಪ್ರಸಾದ್ ರವರು ಹುಲ್ಲೇಪುರ ಗ್ರಾಮದ ಸರ್ವೆ ನಂಬರು 311, 312 ರಲ್ಲಿ 12 ಹೆಕ್ಟರ್ ಜಮೀನಿದ್ದ ಮಂಗಲ 175 ರಲ್ಲಿ ಎರಡು ಎಕರೆ ಜಮೀನಿದೆ ಎಂದು ಶಾಸಕ ಎಂ ಆರ್ ಮಂಜುನಾಥ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಶಾಸಕ ಎಂಆರ್ ಮಂಜುನಾಥ್ ರವರು ಮಾತನಾಡಿ ಹುಲ್ಲೇಪುರ ಗ್ರಾಮದ ಸರ್ವೆ ನಂಬರ 311, 312 ರಲ್ಲಿ ಸರ್ಕಾರಿ ಜಮೀನು ಇದ್ದು ,12 ಎಕ್ಟರ್ ಪ್ರದೇಶದಲ್ಲಿ ಮಿನಿ ವಿಧಾನಸೌಧ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ವಸತಿಗೃಹ ಹಾಗೂ ಮಂಗಲ ಗ್ರಾಮದ ಸರ್ವ ನಂಬರ್ 375 ರಲ್ಲಿ ಎರಡು ಹೆಕ್ಟರ್ ಜಮೀನಿನಲ್ಲಿ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಲಯ ವಸತಿಗೃಹಗಳು ನಿರ್ಮಾಣಮಾಡಲಿಕ್ಕೆ ಡಿಜಿಟಲ್ ಸರ್ವೆ ಕಾರ್ಯ ಆದಷ್ಟು ಬೇಗ ಮಾಡಿಕೊಡಬೇಕು ಎಂದು ಶಾಸಕ ಎಂ ಆರ್ ಮಂಜುನಾಥ್ ರವರು ಸ್ಥಳದಲ್ಲಿದ್ದ ತಹಸೀಲ್ದಾರ್ ಗುರುಪ್ರಸಾದ್ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಶೇಷಣ್ಣ, ಗ್ರಾಮ ಸಹಾಯಕ ಸಿದ್ದರಾಜ್ ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..