ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಆಲಮಟ್ಟಿಯಲ್ಲಿ ದೋಣಿ ವಿಹಾರಕ್ಕೆ ಸಚಿವ ಶಿವಾನಂದ ಪಾಟೀಲ ಅವರಿಂದ ಚಾಲನೆ
ವಿಜಯಪುರ, ಜ.24: ರಾಜ್ಯದ ಕೆಆರ್ಎಸ್ ನಂತರದ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣವಾದ ಆಲಮಟ್ಟಿ ಸಿಲ್ವರ ಲೇಕ್ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಶನಿವಾರದಂದು ಚಾಲನೆ ನೀಡಿದರು.
ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲನಿಗಮದ ವತಿಯಿಂದ ಆಲಮಟ್ಟಿ ರಾಕ್ ಉದ್ಯಾನವನದಲ್ಲಿರುವ ಸಿಲ್ವರ್ ಲೇಕ್ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಚಾಲನೆ ನೀಡಿದ ಅವರು, ಆಲಮಟ್ಟಿ ಪ್ರವಾಸ ತಾಣ ಬಹಳಷ್ಟು ಪ್ರವಾಸಿಗರಿಗೆ ಪ್ರೇಕ್ಷಣಿಯ ಸ್ಥಳವಾಗಿದೆ. ತಾಣದಲ್ಲಿ ಮನೋವುಲ್ಲಾಸದೊಂದಿಗೆ ಉತ್ತರ ಕರ್ನಾಟಕದ ಜನರಿಗೆ, ಮಕ್ಕಳಿಗೆ ಅನುಕೂಲವಾಗಲಿದೆ. ಸಾಯಿನ್ಸ್ ಪಾರ್ಕ್, ಮ್ಯೂಜಿಕಲ್ ಫೌಂಟೇನ್ ಸೇರಿದಂತೆ ವಿವಿಧ ಮನರಂಜನಾ ಉದ್ಯಾನವನಗಳನ್ನು ಅಭಿವೃದ್ದಿಸಿ, ಆಕರ್ಷಿತಗೊಳಿಸಲಾಗಿದೆ. ಇದರೊಂದಿಗೆ ಪೆಡಲ್ ಬೋಟ್, ಮೋಟಾರ್ ಬೋಟ್, ರಾಫ್ಟಿಂಗ್. ಕಯಾಕಿಂಗ್, ಬಿರ್ಂಗ್, ಜಿಪ್ಲೈನ್ ನಂತಹ ಮತ್ತು ಇತರ ಜಲ ಕ್ರೀಡೆಗಳನ್ನು ಹಂತ ಹಂತವಾಗಿ ಆರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಒದಗಿಸಲಾಗುವುದು ಎಂದು ಅವರು ಹೇಳಿದರು.
ಆಲಮಟ್ಟಿಗೆ ಕರ್ನಾಟಕ, ಮಾಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿ ಪ್ರತಿ ವರ್ಷ ಸುಮಾರು 7 ರಿಂದ 8 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ಕೃμÁ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ ಆಲಮಟ್ಟಿ ಜಲಾಶಯದ ಕೆಳಭಾಗದಲ್ಲಿ ವಿಶ್ವ ವಿಖ್ಯಾತ ಮನರಂಜನಾ ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಜಲಾಶಯದ ಬಲ ಭಾಗದಲ್ಲಿ ರಾಕ್ ಉದ್ಯಾನವನ ಹಾಗೂ 77 ಎಕರೆ ಉದ್ಯಾನವನ ಎಂಬ ಎರಡು ಪ್ರಮುಖ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಎಡ ಭಾಗದಲ್ಲಿ ಲವಕುಶ ಉದ್ಯಾನವನ ಹಾಗೂ ಕೃಷ್ಣ ಉದ್ಯಾನವನ ಎಂಬ ಎರಡು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಆಲಮಟ್ಟಿ ಅಣೆಕಟ್ಟಿಗೆ ಬರುವ ಮುಖ್ಯ ರಸ್ತೆಯ ಪಕ್ಕದಲ್ಲಿ ಮೊದಲು ಕಲ್ಲುಗಳ ರಾಶಿ ಬಿದ್ದಿದ್ದ ಹಳೆಯ ತಾಣವಿತ್ತು. ಆ ಜಾಗದಲ್ಲಿ ಒಂದು ಕೃತಕ ಕೆರೆ-ಸರೋವರವನ್ನು ನಿರ್ಮಿಸಲು ನಿರ್ಧರಿಸಿ 2003-04 ರಲ್ಲಿ ಕೆಲಸ ಪೂರ್ಣಗೊಳಿಸಲಾಯಿತು. ಈ ಸರೋವರವು 10 ಅಡಿ ಆಳವಿದ್ದು, ಸರೋವರದ ಮಧ್ಯದಲ್ಲಿ ಜಪಾನಿ ಮಾದರಿಯ ‘ಗೇಜೆಬೊ’ (gಚಿzebo) ನಿರ್ಮಿಸಲಾಗಿದೆ. ಸುತ್ತಲೂ ಆಕರ್ಷಕ ತಡೆಗೋಡೆ ಮತ್ತು ಪಥಗಳನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಕೆರೆ/ಸರೋವರದ ದಂಡೆಯ ಮೇಲೆ 5 ಜಪಾನಿ ಮಾದರಿಯ ಗೇಜೆಬೊಗಳಿವೆ. ಸರೋವರಕ್ಕೆ ಅಣೆಕಟ್ಟಿನಿಂದ ಗುರುತ್ವಾಕರ್ಷಣೆಯ ಮೂಲಕ ಪೈಪ್ ಲೈನ್ ಮೂಲಕ ನೀರು ಪೂರೈಸಲಾಗುತ್ತದೆ. ಈ ಸರೋವರವು ಕನ್ನಡಿಯಂತೆ ಸುತ್ತಮುತ್ತಲಿನ ಪ್ರಕೃತಿಯನ್ನು ಪ್ರತಿಬಿಂಬಿಸುವುದರಿಂದ ಇದಕ್ಕೆ “ಸಿಲ್ವರ್ ಲೇಕ್” ಎಂದು ಹೆಸರಿಡಲಾಗಿದೆ. ಈ ಕಾರಣದಿಂದ ಈ ಕೆರೆಯಲ್ಲಿ ದೋಣಿ ವಿಹಾರ & ಜಲ ಕ್ರೀಡೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಆರ್ ಪಾಟೀಲ್ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರರಾದ ಬಸವರಾಜ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.



















