ಸಚಿವ ಎಂ ಬಿ ಪಾಟೀಲ ಕೆರೆಯಲ್ಲಿ ಗಳಿಸಿದ ಹೆಸರು ಆಸ್ಪತ್ರೆಯಲ್ಲಿ ಕಳೆದುಕೊಳ್ಳಬೇಡಿ-ಡಾ ಸಿದ್ದನಗೌಡ ಪಾಟೀಲ. ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ನಾಡಿನ ಹಿರಿಯ ಚಿಂತಕರ ಆಗ್ರಹ
ವಿಜಯಪುರ: ಜಿಲ್ಲೆಗೆ ಯಾಕೆ ತಾರತಮ್ಯ, ವಿಜಯಪುರ ಜಿಲ್ಲೆಯಲ್ಲಿ ಸಕಲ ಸೌಲಭ್ಯ ಇರುವ ಸರಕಾರಿ ವ್ಯವಸ್ಥೆ ಇದೆ, ಬಡ ಜನರಿಗೆ ಸರ್ಕಾರ ಮೋಸ ಮಾಡುತ್ತಿದೆ. ವಿಜಯಪುರ ಆ ಕಾಲದಲ್ಲಿಯೇ ರಾಜಧಾನಿ ಆಗಿರುವುದು ಇದಕ್ಕೆ ಮೆಡಿಕಲ್ ಕಾಲೇಜ್ ಮಾಡಲಿಕ್ಕೆ ನಿಮಗೆ ಏನು ತೊಂದ್ರೆ ಎಂದು ಹಿರಿಯ ಸಮಾಜವಾದಿ ಮುಖಂಡ ಡಾ ಸಿದ್ದನಗೌಡ ಪಾಟೀಲ ಪ್ರಶ್ನೆ ಮಾಡಿದರು. ಅವರು ನಗರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟ ಅಹೋರಾತ್ರಿ ಧರಣಿ ವೇದಿಕೆಯಲ್ಲಿ ನಾಡಿನ ಹಿರಿಯ ಹೋರಾಟ ಬೆಂಬಲಿಸಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಚಿವ ಎಂ ಬಿ ಪಾಟೀಲ ನೀವು ಕೈಗಾರಿಕಾ ಮಂತ್ರಿ ಆಗಿ ಆದರೆ ಕೈಗಾರಿಕಾ ಉದ್ಯಮಿಗಳ ಮಂತ್ರಿ ಆಗಬೇಡಿ, ನೀವು ಬಂಡವಾಳಶಾಹಿಗಳ ಗುಲಾಮರಾಗಬೇಡಿ ಎಂದು ಹೇಳಿದ ಅವರು ಜಿಲ್ಲೆಯ ಆಸ್ಪತ್ರೆ ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಹೋಗಲು ಹೋರಾಟಗಾರರು ಬಿಡೋದಿಲ್ಲ ಎಂದರು. ಮುಖ್ಯಮಂತ್ರಿಗಳ ನವೆಂಬರ್ ೧೯ರ ಅಧಿಕೃತ ಕಾರ್ಯಕ್ರಮದ ಪಟ್ಟಿಯಲ್ಲಿ ನಿಯೋಗದ ಭೇಟಿ ಇರಲಿಲ್ಲ, ನಿಯೋಗ ನಿಗದಿ ಆಗದ ಕಾರಣ ಅದು ವಿಫಲವಾಗಿದೆ ಪಿ ಪಿ ಪಿ ಮಾಧರಿ ಜಾರಿಯಲ್ಲಿ ಎಲ್ಲ ಪಕ್ಷಗಳದು ಪಾತ್ರವಿದೆ. ರಾಜಕಾರಣಿಗಳ ಹಿತಾಸಕ್ತಿ ಬಂದರೆ ಎಲ್ಲರು ಒಂದೇ ಜಿಲ್ಲೆಯ ರಾಜಕಾರಣಿಗಳು ಒಳ ಒಪ್ಪಂದದಿoದ ಸರಕಾರಿ ಆಸ್ಪತ್ರೆ ಕಳೆದುಕೊಳ್ಳುವ ಸಂಭವ ಬಂದಿದೆ. ರಾಜಕಾರಣಿಗಳಿಗೆ ನಮಗೆ ರಾಜಕೀಯವಾಗಿ ಪೆಟ್ಟು ಕೊಡುತ್ತದೆ ಎಂದು ಗೊತ್ತಾದಾಗ ಮಾತ್ರ ಈ ಬೇಡಿಕೆ ಈಡೇರುತ್ತದೆ. ಜೊತೆಗೆ ಅಧಿವೇಶನ ಮುಗಿದ ತಕ್ಷಣ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಂಬಿ ಪಾಟೀಲರಿಗೆ ಭೇಟಿ ಆಗಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ಎಂ.ಬಿ ಪಾಟೀಲ ಕೆರೆಯಲ್ಲಿ ಗಳಸಿದ ಹೆಸರು ಆಸ್ಪತ್ರೆಯಲ್ಲಿ ಕಳೆದುಕೊಳ್ಳಬೇಡಿ, ಈ ಹೋರಾಟ ಯಾವುದೇ ರಾಜಕಾರಣಿಗಳ ವಿರುದ್ಧವಲ್ಲ ಜಿಲ್ಲೆಯ ಸಚಿವರು ಶಾಸಕರು ಆಸ್ಪತ್ರೆಕೊಳ್ಳಲು ಹುನ್ನಾರ ಮಾಡುತ್ತಿದ್ದಾರೆ ಎಂಬ ಭಾವನೆ ಜಿಲ್ಲೆಯ ಜನರ ಮನದಲ್ಲಿ ಮನೆ ಮಾಡಿದೆ. ಕೂಡಲೇ ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಹಂಪಿ ವಿವಿ ಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರು ಮಾತನಾಡಿ ಸರಕಾರದ ವಿರುದ್ಧ ಸುಧೀರ್ಘ ಹೋರಾಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ, ಜಿಲ್ಲೆಯ ಸಚಿವರು ಶಾಸಕರು ಹೋರಾಟಕ್ಕೆ ಬೆಂಬಲಿಸಬೇಕು. ನಮ್ಮ ಭಾಗದ ರಾಜಕಾರಣಿಗಳು ಹೋರಾಟದ ಜೊತೆಗೆ ನಿಂತು ಜನರ ಬೇಡಿಕೆ ಈಡೇರಿಸಬೇಕು. ಜೊತೆಗೆ ಎಲ್ಲ ಜನರು ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು ಆರೋಗ್ಯ ಮತ್ತು ಶಿಕ್ಷಣವನ್ನು ಖಾಸಗಿಕರಣ ಮಾಡಬಾರದು ಎಂದು ಒತ್ತಾಯಿಸಿದರು. ವಿಜಯಪುರ ಜಿಲ್ಲೆಯ ಸಚಿವರು ಮತ್ತು ಶಾಸಕರು ಜನರ ಬೇಡಿಕೆ ಸಿಎಂ ಅವರಿಗೆ ಮನವರಿಕೆ ಮಾಡಲು ವಿಫಲರಾಗಿದ್ದಾರೆ.ಇದು ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ತೋರಿಸುತ್ತದೆ ಎಂದರು.
ಹಿರಿಯ ಪತ್ರಕರ್ತ ಸಾಮಾಜಿಕ ಹೋರಾಟಗಾರ ಸನತಕುಮಾರ ಬೆಳಗಲಿ ಅವರು ಮಾತನಾಡಿ ಹೋರಾಟಗಾರರದು ಒಂದೇ ಬೇಡಿಕೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕು ಎನ್ನುವುದು. ಜನರ ಬೇಡಿಕೆಗೆ ನಕಾರಾತ್ಮಕವಾಗಿ ಸ್ಪಂದನೆ ಮಾಡಿದ್ರೆ ಮುಂದಿನ ದಿನಗಳಲ್ಲಿ ನೀವು ಶಾಸಕರು ಆಗಿ ಆಯ್ಕೆ ಆಗುವುದು ಕಷ್ಟವಾಗುತ್ತದೆ. ಮುಖ್ಯಮಂತ್ರಿಗಳು ಜನಪರವಾಗಿದ್ದಾರೆ, ಹೋರಾಟ ನಿರಂತರವಾಗಿ ನಡೆದರೆ ಜಯ ಸಿಕ್ಕೇಸಿಗುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡಿ ನೂರು ದಿನ ಪೂರೈಸುವುದರೊಳಗೆ ಬೇಡಿಕೆ ಈಡೇರಿಸಬೇಕು. ಸಚಿವ ಎಂ ಬಿ ಪಾಟೀಲ ಜಿಲ್ಲೆಯ ಜನರ ನೋವು ಮತ್ತು ಬೇಡಿಕೆ ಸರಕಾರದ ಮಟ್ಟದಲ್ಲಿ ಪೂರೈಸಲು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಹಿರಿಯ ಚಿಂತಕ ಹಾಗೂ ವಾಲ್ಮಿ ಸಮಾಜದ ನಿರ್ದೇಶಕರಾದ ರಾಜೇಂದ್ರ ಪೊದ್ದಾರ ಅವರು ಮಾತನಾಡಿ ಪಿ ಪಿ ಪಿ ಮಾಡೆಲ್ ನಮ್ಮ ನೆಲದ ವ್ಯವಸ್ಥೆ ಅಲ್ಲ ಇಲ್ಲಿ ಲಾಭವೆ ಅವರಿಗೆ ಮುಖ್ಯ, ಶ್ರೀಮಂತರಿಗೆ ಲಾಭ ಮಾಡುವ ಅಂತಾರಾಷ್ಟ್ರೀಯ ಹುನ್ನಾರ ಇದರ ಇದರ ಹಿಂದೆ ಅಡಗಿದೆ ಎಂದು ಹೇಳಿದ ಅವರು ಸರಕಾರ ಜನ ವಿರೋಧಿಯಾದರೆ ಜನರ ಮತ ಮತ್ತು ತೆರಿಗೆಗೆ ಏನು ಬೆಲೆಯಿದೆ ಎಂದು ಪ್ರಶ್ನೆ ಮಾಡಿದ ಅವರು ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನಪರವಾಗಿ ನಿಂತು ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು. ಜನರಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿ ಆಯ್ಕೆ ಆದ ಜನಪ್ರತಿನಿದಿಗಳು ಜನರ ಆರೋಗ್ಯದ ಬೇಡಿಕೆಗೆ ಸ್ಪಂದಿಸಬೇಕು. ಸಮಾಜವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನ ಬೇಡಿಕೆಗೆ ಸ್ಪಂದಿಸಲಿ ಎಂದರು.
ಹಿರಿಯ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ಮಾತನಾಡಿ ಧರಣಿ ಸರಕಾರದ ಗಮನಕ್ಕೆ ಬಂದಿದೆ ಆದರೆ ವಿಳಂಬಕ್ಕೆ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಉತ್ತರಿಸಬೇಕಾಗಿದೆ. ಈ ಹೋರಾಟಕ್ಕೆ ನಮಗೂ ಸಂಬAಧ ಇಲ್ಲ ಎಂಬAತೆ ಸಚಿವರು, ಶಾಸಕರು ವರ್ತಿಸುತ್ತಿದ್ದಾರೆ, ನಿಮಗೆ ಮೆಡಿಕಲ್ ಕಾಲೇಜ್ ಮಾಡಲು ಆಗದಿದ್ದರೆ ಸಾಮೂಹಿಕ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ಚಳುವಳಿ ಇಲ್ಲಿಗೆ ನಿಲ್ಲೋದಿಲ್ಲ ನಿರಂತರವಾಗಿರುತ್ತೆ ಡಿಸೆಂಬರ್ ೨೬ಕ್ಕೆ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಮನೆ ಮುಂದೆ ಧರಣಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಉಸ್ತುವಾರಿ ಸಚಿವರು ತಮ್ಮ ಮೆಡಿಕಲ್ ಕಾಲೇಜ್ ಗೆ ತೊಂದ್ರೆ ಆಗುತ್ತೆ ಎಂದು ಖಾಸಗಿಕರಣ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ಇಲ್ಲಿವರೆಗೂ ನಡೆದ ಹೋರಾಟಗಳ ಕುರಿತು ಹಿರಿಯ ಹೋರಾಗಾರರಾದ ಬಿ. ಭಗವಾನ ರೆಡ್ಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಬಾಬುರಾವ ಬೀರಕಬ್ಬಿ, ಸುರೇಶ ಜೀಬಿ, ವಿನೋದ ಖೇಡ, ಸುರೇಶ ಬಿಜಾಪುರ, ಭರತಕುಮಾರ ಎಚ್ ಟಿ, ವಿ ಸಿ ನಾಗಠಾಣ, ಜಂಬುನಾಥ ಕಂಚಾಣಿ, ಶ್ರೀಶೈಲ ಸಜ್ಜನ, ಅಕ್ರಮ ಮಾಶಾಳಕರ, ಮಲ್ಲಿಕಾರ್ಜುನ ಬಟಗಿ, ಮಲ್ಲಿಕಾರ್ಜುನ ಹೆಚ್ ಟಿ,ವಿ.ಎ ಪಾಟೀಲ, ಜಗದೇವ ಸೂರ್ಯವಂಶಿ, ಸಿ ಬಿ ಪಾಟೀಲ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಗೀತಾ ಎಚ್ ಅಶೋಕ ವಾಲಿಕಾರ, ಸುಶೀಲಾ ಮಿಣಜಗಿ, ಚಂದ್ರಶೇಖರ ಬಗಲಿ, ಸುಭಾಸ ಹೊನ್ನಕಂಠಿ, ಸಲೀಂ ಹೊಕ್ರಾಣಿ, ಸುರೇಶ ಬಿರಾದಾರ ಜಬೀನ ಅಥಣಿ, ಲಾಯಪ್ಪ ಇಂಗಳೆ ಪ್ರಕಾಶ ಸಬರದ ನೀಲಾಂಬಿಕಾ ಬಿರಾದಾರ,ಸುರೇಶ ಪಾಟೀಲ, ಜ್ಯೋತಿ ಮಿಣಜಗಿ,ದಸ್ತಗಿರ ಉಕ್ಕಲಿ,ಪ್ರಕಾಶ ಬಗಲಿ, ಸೇರಿ ಹಲವರು ಉಪಸ್ಥಿತರಿದ್ದರು

















