ಕೀವ್ (ಉಕ್ರೇನ್) :ಉಕ್ರೇನ್ನ ರಾಜಧಾನಿ ಕೀವ್ ಹಾಗೂ ಉತ್ತರ ಪ್ರದೇಶದ ಚೆರ್ನಿಹಿವ್ನ ಸುತ್ತ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆ ಮಾಡುತ್ತಿದೆ ಎಂದು ರಷ್ಯಾ ಹೇಳಿಕೆ ನೀಡಿದೆ. ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಈ ಕ್ರಮವು ಮುಂದಿನ ಮಾತುಕತೆಗಳಿಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು. ಇಂದು ಟರ್ಕಿಯಲ್ಲಿ ಶಾಂತಿ ಮಾತುಕತೆಗಾಗಿ ರಷ್ಯಾ ಹಾಗೂ ಉಕ್ರೇನ್ ಪ್ರತಿನಿಧಿಗಳು ಇಂದು ಭೇಟಿಯಾಗಿ ಮಾತುಕತೆ ನಡೆಸಲ್ಲಿದ್ದಾರೆ.