ದುಷ್ಕೃತ್ಯವೆಸಗಿದ ಉಗ್ರರನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಬೇಕು : ಎಬಿವಿಪಿ
ಇಂಡಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ಕೃತ್ಯವನ್ನು ಖಂಡಿಸಿ ಅಭಾವಿಪ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ದುಷ್ಕೃತ್ಯವೆಸಗಿದ ಉಗ್ರರನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಬೇಕೆಂದು ತಹಸೀಲ್ದಾರ ಬಿ.ಎಸ್.ಕಡಕಭಾವಿ ಅವರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರಘಟಕದ ಅಧ್ಯಕ್ಷ ಭೀಮನಗೌಡ ಬಗಲಿ ಮಾತನಾಡಿ, ಕಾಶ್ಮೀರದಲ್ಲಿ ಇಂತಹ ದುಷ್ಕೃತ್ಯವೆಸಗಿದ ಉಗ್ರರನ್ನು ನಮ್ಮ ಸೇನೆ ಸುಮ್ಮನೆ ಬಿಡಬಾರದು. ಅಲ್ಲಿ ಹರಿದ ಹಿಂದೂಗಳ ಒಂದೊAದು ಹನಿ ರಕ್ತಕ್ಕೂ ಬೆಲೆ ಬರಬೇಕು. ಆ ರೀತಿಯಲ್ಲಿ ಉಗ್ರಗಾಮಿಗಳ ಹುಟ್ಟಡಗಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ನಾಗೇಶ ಹೆಗಡ್ಯಾಳ ಮಾತನಾಡಿ, ಮನುಷ್ಯತ್ವವಿಲ್ಲದ ರಾಕ್ಷಸೀ ಕೃತ್ಯೆವೆಸಗಿದ ಉಗ್ರಗಾಮಿಗಳ ತಲೆ ತೆಗೆಯಬೇಕು. ಕೇಂದ್ರ ಸರಕಾರ ನಮ್ಮ ದೇಶದ ೨೬ ಜೀವಗಳಿಗೆ ಪ್ರತೀ ಜೀವಕ್ಕೆ ನೂರರಷ್ಟು ಉಗ್ರರನ್ನು ಹೊಡೆದುರುಳಿಸಿ ಭಾರತೀಯರಿಗೆ ಸಮಾಧಾನ ಪಡಿಸುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ಅಭಾವಿಪ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತೇವೆ ನಮಗೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಗಳನ್ನು ಕಳುಹಿಸಬೇಕೆಂದು ಬುಧವಾರವೇ ಪತ್ರದ ಮೂಲಕ ಮನವಿ ಮಾಡಿದ್ದರೂ ಸಹ ಯಾವೊಬ್ಬ ಪೊಲೀಸ್ ಸಿಬ್ಬಂದಿ ಬರದಿದ್ದಕ್ಕೆ ವಿದ್ಯಾರ್ಥಿಗಳು ಮಿನಿ ವಿಧಾನಸೌಧ ಮುಂಭಾಗ ರಸ್ತೆ ತಡೆ ನಡೆಸಿ, ಪೊಲೀಸರ ವಿರುಧ್ಧ ಘೋಷಣೆ ಕೂಗಿದರು. ಟ್ರಾಫಿಕ್ ಆಗುತ್ತಿದ್ದಂತೆ ಶಹರ ಸಿಪಿಐ ಪ್ರದೀಪ ಭಿಸೆ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದರು. ಈ ನಡುವೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಹಸೀಲ್ದಾರ ಕಡಕಭಾವಿ ಅವರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಮನವೊಲಿಸಿ ಮನವಿ ಪಡೆದುಕೊಂಡರು.
ಶ್ರೀನಗರದಲ್ಲಿ ನಡೆದ ಉಗ್ರ ಘಟನೆ ಖಂಡಿಸಿ ಅಭಾವಿಪ ನಡೆಸುವ ಪ್ರತಿಭಟನೆಗೆ ಪೊಲೀಸರು ಬಂದೋಬಸ್ತ ನೀಡಲಿಲ್ಲ. ಪೊಲೀಸ್ ಇಲಾಖೆಯ ನಿರ್ಲಕ್ಷ ಎದ್ದು ಕಾಣುವ ಕಾರಣ ನಾವು ರಸ್ತೆ ತಡೆ ನಡೆಸಬೇಕಾಯಿತು.
ಭೀಮನಗೌಡ ಬಗಲಿ. ಅಭಾವಿಪ ನಗರ ಕಾರ್ಯದರ್ಶಿ.
ಪೊಲೀಸರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬಂದೋಬಸ್ಥ ನೀಡಿಲ್ಲ. ಇದರಲ್ಲಿ ರಾಜಕೀಯ ಷಡ್ಯಂತ್ರವಿದೆಯೋ ಅಥವಾ ಪೊಲೀಸ್ ಇಲಾಖೆಯ ನಿರ್ಲಕ್ಷವೋ ಪೊಲೀಸ್ ಅಧಿಕಾರಿಗಳೇ ಉತ್ತರ ಕೊಡಬೇಕು.
ನಾಗೇಶ ಹೆಗಡ್ಯಾಳ. ಹಿಂದೂ ಪರ ಮುಖಂಡ.
ಸುಮಾರು ಅರ್ಧ ಘಂಟೆಗೂ ಹೆಚ್ಚುಕಾಲ ಟ್ರಾಫಿಕ್ ಆಗಿ, ವಾಹನ ದಟ್ಟಣೆಯಾಗಿತ್ತು. ಬಾಳು ಮುಳಜಿ, ಸುನೀಲಗೌಡ ಬಿರಾದಾರ, ಧರ್ಮರಾಜ ಸಾಲೋಟಗಿ, ರಾಹುಲ್ ಜಾಧವ, ಗಣೇಶ ಹಂಜಗಿ, ಸಚಿನ್ ಧಾನಗೊಂಡ, ಅರುಣ ಪೂಜಾರಿ, ಪ್ರಫುಲ್ ಕಟ್ಟೀಮನಿ, ಲಕ್ಷಿö್ಮÃ ಚವ್ಹಾಣ, ಭಾಗ್ಯಶ್ರೀ ಬಿರಾದರ, ಪೂಜಾ ರಾಠೋಡ, ಚೇತನ್ ಮರಡಿ, ಆದಿತ್ಯ ರಾಠೋಡ, ನಿರ್ಮಲಾ ಬಿರಾದಾರ, ಭಾಗ್ಯಶ್ರೀ ಮೇತ್ರಿ, ಸೇರಿದಂತೆ ಮತ್ತಿತರರಿದ್ದರು.
ಇಂಡಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ಕೃತ್ಯವನ್ನು ಖಂಡಿಸಿ ಅಭಾವಿಪ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಬಿ.ಎಸ್.ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ಇಂಡಿ: ಪಟ್ಟಣದಲ್ಲಿ ಅಭಾವಿಪ ಕಾರ್ಯಕರ್ತರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ಕೃತ್ಯವನ್ನು ಖಂಡಿಸಿ ಟಾಯರಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.