ಇಂಡಿ: ರಾಜ್ಯದಲ್ಲಿ ಎಮ್ ಇ ಎಸ್ ಮತ್ತು ಶೀವಸೇನೆ ಸಂಘಟನೆ ಪುಂಡರ ಪುಂಡಾಟಿಕೆ ಹೆಚ್ಚಾಗಿದೆ ಕೂಡಲೇ ನಿಷೇಧಿಸಬೇಕು ಎಂದು ತಾಲೂಕು ಕರವೇ ಅಧ್ಯಕ್ಷ ಶೀವು ಮಲಕಗೊಂಡ ಹೇಳಿದರು. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡದ ಭಾವುಟಕ್ಕೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು ಕನ್ನಡ ನಾಡಿನ ನೆಲ ಜಲ ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತಿಗೆ ದಕ್ಕೆ ತಂದಿರುವುದು ಅತ್ಯಂತ ಖಂಡನಿಯವಾಗಿದೆ ಕೂಡಲೇ ರಾಜ್ಯದಲ್ಲಿ ಸಂಘಟನೆಗಳನ್ನು ನಿಷೇದಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಪ್ರಾರಂಭಿಸಿ ಬಸವೇಶ್ವರ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ಹಿಡಿದು ಮಹಾರಾಷ್ಟ್ರ ಮುಖ್ಯ ಮಂತ್ರಿಯ ಭಾವಚಿತ್ರ ದಹಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು.ನಂತರ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಮಾತಾನಾಡಿ ಈ ನಾಡಿನ ಕ್ರಾಂತಿಕಾರಿ ಹೋರಟಗಾರ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿದ್ದು ನಮ್ಮ ಕರ್ನಾಟಕ ನಾಡಿನ ಜನರಿಗೆ, ಕನ್ನಡಿಗರಿಗೆ ದೊಡ್ಡ ಪ್ರಮಾಣದಲ್ಲಿ ಅವಮಾನ ಮಾಡಿದ ಸಂಗತಿಯಾಗಿದೆ. ಇಂತಹ ಕೆಟ್ಟ ಮನೊವೃತ್ತಿಯುಳ್ಳ ಪುಂಡರಿಗೆ ನಮ್ಮ ರಾಜ್ಯದಲ್ಲಿ ಅವಕಾಶ ಕೊಡಬಾರದು.ಇಂತಹ ದೇಶ ದ್ರೋಹಿ ಮತ್ತು ರಾಜ್ಯದ ಜನರ ಘನತೆಗೆ ದಕ್ಕೆ ತರುವಂತಹ ಕೆಲಸ ಮಾಡುತ್ತಿರು ಎಮ್ ಇ ಎಸ್ ಮತ್ತು ಶಿವಸೇನೆಯಂತಹ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಿ ಅಂತವರಿಗೆ ಸರಕಾರ ಕಠಿಣವಾದ ಶಿಕ್ಷೆ ನೀಡುಬೇಕು. ರಾಜ್ಯದ ಭಾಷೆ ನೆಲ ಜಲದ ವಿಷಯದಲ್ಲಿ ಇನ್ನೂ ಮುಂದೆ ಯಾರಾದರು ಈ ರೀತಿ ನಡೆದುಕೊಂಡಲ್ಲಿ ಅಂತವರಿಗೆ ಇದೊಂದು ಎಚ್ಚರಿಯೆ ಘಂಟೆಯ ಪಾಠ ವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಭು ಬಬಲೇಶ್ವರ, ಜಗದೀಶ್ ಕುಂಬಾರ, ಅಯುಭ ನಾಟೀಕಾರ, ಮಂಜು ತೇಲಿ,ಪಿಂಟು ಪಾಟೀಲ, ವಾಯಿದ್ ಮುಜಾವರ್,ಶಿವಕುಮಾರ ಬರಡೊಲ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು.