ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು:ಫಾದರ್ ರೋಷನ್ ಬಾಬು
ಹನೂರು :ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2024 ಗುಂಡು ಎಸೆಯುವುದರ ಮೂಲಕ
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ರೋಷನ್ ಬಾಬು ನಂತರ ಮಾತನಾಡಿದ ಅವರು ಕ್ರೀಡಾ ಕೂಟಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮವಾಗಿ ಆರೋಗ್ಯ ಸುಧಾರಿಸಲು ಕ್ರೀಡೆಯು ಬಹಳ ಸಹಾಯ ಮಾಡುತ್ತದೆ ಎಂದು ತಿಳಿಸಿದರು .
ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಕ್ರಿಸ್ತರಾಜ ಪ. ಪೂರ್ವ ಕಾಲೇಜು ಹನೂರು ಹಾಗೂ ಸೆಂಟ್ ಮೇರಿಸ್ ಪ. ಪೂರ್ವ ಕಾಲೇಜು ಮಾಟಳ್ಳಿ ಇವರ ವತಿಯಿಂದ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದ ಸಂದರ್ಭದಲ್ಲಿ ಮಾತನಾಡಿದ ಪಪೂರ್ವ ಕಾಲೇಜಿನ ಜಿಲ್ಲಾ ಉಪ ನಿರ್ದೇಶಕರಾದ ಮಂಜುನಾಥ್ ಪ್ರಸನ್ನ ಮಾತನಾಡಿ ಕ್ರೀಡಾ ಕೂಟದ ಆಯೋಜಕರು ಪ್ರತಿವರ್ಷವು ಅಯಾ ಶಾಲಾ ಕಾಲೇಜುಗಳಲ್ಲಿ ಸಹಪಟ್ಯ ಚಟುವಟಿಕೆಗಾಗಿ ಕ್ರೀಡಾ ಕೂಟ ಹಮ್ಮಿಕೊಂಡಿದ್ದೇವೆ, ಹಲವಾರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಯ್ಕೆಯಾಗುವುದು ಬಹಳ ಸಂತೋಷದ ಸಂಗತಿಯಾಗಿದೆ . ಪ್ರತಿಯೋಬ್ಬರು ಮತ್ತೋಬ್ಬರ ಆಯ್ಕೆ ಮನೋಭಾವ ಇರಬೇಕು ,ಇದೇ ರೀತಿಯಲ್ಲಿ ಮುಂದಿನ ಕ್ರೀಡಾ ಕೂಟವು ವಿವೇಕಾನಂದ ಕಾಲೇಜಿನಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಫಾದರ್ ಟೆನ್ನಿ ಕುರಿಯನ್ ವ್ಯವಸ್ಥಾಪಕ ಸೆಂಟ್ ಮೇರಿಸ್ ವಿದ್ಯಾ ಸಂಸ್ಥೆ ಮಾಟಳ್ಳಿ, ಮಂಜುನಾಥ್ ಪ್ರಸನ್ನ ಉಪನಿರ್ದೇಶಕ ಪ. ಪೂರ್ವ ಶಿಕ್ಷಣ ಇಲಾಖೆ ಚಾ ನಗರ, ಆರ್ ಪಿ ನರೇಂದ್ರನಾಥ್ ಅಧ್ಯಕ್ಷರು ಜಿಲ್ಲಾ ಪ್ರಾಂಶುಪಾಲ ಸಂಘ ಚಾ ನಗರ ಜಿಲ್ಲೆ, ದೈಹಿಕ ಶಿಕ್ಷಕರಾದ ಕೆಂಪರಾಜು, ಜೋಸೆಫ್, ಎಲ್ಲಾ ಪ. ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.