ಇಂಡಿ: ಮೇಕೆದಾಟು ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಿಠಲ್ ಕಟ್ಕದೊಂಡ್ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರಕ್ಕೆ ಬರಬೇಕಿದ್ದ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಇನ್ನು ಚಿಮ್ಮಲಗಿ ಏತನೀರಾವರಿ ಗುತ್ತಿಬಸವಣ್ಣ, ರೇವಣ್ಣಸಿದ್ದೇಶ್ವರ ಯೋಜನೆಗಳು ಪೂರ್ಣಗೊಂಡಿಲ್ಲ. ಇದರ ಹಿಂದೆ ಸಚಿವ ಕಾರಜೋಳ ಕೈವಾಡ ಇದೆ. ಕಳೆದ ಬಾರಿ ಈ ಕ್ಷೇತ್ರದಿಂದ ಸಚಿವರ ಪುತ್ರ ಪರಾಜಿತಗೊಂಡಿದ್ದರು. ಅದಕ್ಕಾಗಿ ಯೋಜನೆಯನ್ನು ತಡೆಹಿಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಅದಕ್ಕಾಗಿ ಅಭಿವೃದ್ಧಿ ವಿಚಾರಕ್ಕೆ ಸಚಿವ ಕಾರಜೋಳ ರಾಜಕೀಯ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.



















