ಇಂಡಿ : ಇಂಡಿ ಪಟ್ಟಣದಲ್ಲಿ ವ್ಯಾಪ್ಯಾರಿ ಕೇಂದ್ರವಾಗಿ ನಿರ್ಮಾಣಗೊಳ್ಳುತ್ತಿರುವ ಮೇಗಾ ಮಾರುಕಟ್ಟೆ ಕಾಮಗಾರಿ ಶಾಸಕ ಯಶವಂತರಾಯಗೌಡ ಪಾಟೀಲ್ ವೀಕ್ಷಿಸಿದರು.
ಆದರೆ ಪಟ್ಟಣದಲ್ಲಿ ವ್ಯಾಪಾರಸ್ಥರು, ವ್ಯಾಪಾರ ಮಾಡಲು ಒಂದಿಲ್ಲದ, ಒಂದು ತೊಂದರೆ ಯಾವಾಗಲೂ ಅನುಭವಿಸುತ್ತಿದ್ದರು. ವ್ಯಾಪಾರ ವಹಿವಾಟು ಮಾಡಲು ಸೂಕ್ತ ಸ್ಥಳವಿಲ್ಲದೇ ರಸ್ತೆ ಪಕ್ಕ ವ್ಯಾಪಾರ ಮಾಡುವ ಪರಿಸ್ಥಿತಿ ಇತ್ತು. ಅದಕ್ಕೆ ವಾಹನಗಳ ದರ್ಪ ಒಂದು ಕಡೇಯಾದರೆ, ಪೋಲಿಸರ ಸೂಕ್ಷ್ಮ ಭಾಷೆಯೂ ಕೂಡಾ ವ್ಯಾಪಾರಸ್ಥರ ಮೇಲೆ ಪರಿಣಾಮ ಬೀರತಿತ್ತು. ವ್ಯಾಪಾರಸ್ಥರ ನೋವು ಅರಿತು ಮತ್ತು ಭವಿಷ್ಯದ ಜಿಲ್ಲಾ ಕೇಂದ್ರವಾಗುವ ಸ್ಥಳಕ್ಕೆ ಮೂಲ ಸೌಕರ್ಯಗಳು ಒದಗಿಸಬೇಕು ಎಂದು ಅಂದಾಜು 30 ಕೋಟಿ ರೂಪಾಯಿ ವೆಚ್ಚದಲ್ಲಿ 3 ಮಹಡಿಯ ಮೆಗಾ ಮಾರುಕಟ್ಟೆ ಜುಲೈ 12, 20201 ರಂದು ಶಂಕು ಸ್ಥಾಪನೆಗೊಂಡಿತು. ಆ ಮೆಗಾ ಮಾರುಕಟ್ಟೆಯ ಕಾಮಗಾರಿಯನ್ನು ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಚೆರ್ಚೆ ಮಾಡಿದರು.