ಲಿಂಗಸೂಗೂರು: ತಾಲೂಕಿನ ಹಲಕಾವಟಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಗರಹಾಳ CRC ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ಪೂಜಾರಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕ್ರೀಡಾಕೂಟದ ಧ್ವಜವನ್ನು ತಾಲೂಕ ದೈಹಿಕ ಶಿಕ್ಷಣಾಧಿಕಾರಿಯಾದ ಚನ್ನಬಸವರಾಜ ಮೇಟಿ ಉದ್ಘಾಟನೆ ಮಾಡಿದರು.
ಕ್ರೀಡಾ ಜ್ಯೋತಿಯನ್ನು ವಲಯದ ಶಿಕ್ಷಣ ಸಂಯೋಜಕರಾದ ಮಹಾಂತೇಶ್ ಬಳ್ಳೊಳ್ಳಿ ಸ್ವೀಕರಿಸಿದರು. ಪ್ರಾಸ್ತಾವಿಕವಾಗಿ CRP ಹೇಮಯ್ಯನವರು ಮಾತನಾಡಿದರು. ಕ್ರೀಡಾಕೂಟದ ಮಹತ್ವದ ಬಗ್ಗೆ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗುರುಸಂಗಯ್ಯ ಗಣಾಚಾರಿ ಮಾತನಾಡಿದರು.
ಅಧ್ಯಕ್ಷೀಯ ನುಡಿಗಳನ್ನು ಶಾಲೆಯ ಮುಖ್ಯಗುರುಗಳಾದ ದಾಕ್ಷಾಯಿಣಿ ಮಾತನಾಡಿದರು. ಕಾರ್ಯಕ್ರಮವನ್ನು ಗೋಪಾಲ ಮಾಡಬಾಳ ಶಿಕ್ಷಕರು ನಿರೂಪಿಸಿದರು. ಮಲ್ಲಿಕಾರ್ಜುನ್ ಹೋಟಿ ಸ್ವಾಗತಿಸಿದರು. ಮಾನಪ್ಪ ರಾಠೋಡ್ ವಂದಿಸಿದರು.
ಕಾರ್ಯಕ್ರಮದಲ್ಲಿ BRP ಗಳು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಸಂಘಟನಾ ಕಾರ್ಯದರ್ಶಿಗಳು, ಗ್ರಾಮ ಪಂಚಾಯತ್ ಸದಸ್ಯರು, ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಗುರುಗಳು, ದೈಹಿಕಶಿಕ್ಷಕರು, ನಿರ್ಣಾಯಕರು, ಹಲಕಾವಟಗಿ ಗ್ರಾಮದ ಕ್ರೀಡಾ ಅಭಿಮಾನಿಗಳು, ಯುವಕರು, ಹಿರಿಯರು, ಮಹಿಳೆಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.