ಲಿಂಗಸೂಗೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಾವಿನಭಾವಿ ಗ್ರಾಮದಲ್ಲಿ CSC ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು. ಈ ವೇಳೆ ಟ್ರಸ್ಟ್ನ ಯೋಜನಾಧಿಕಾರಿ ಮಹೇಶ್ ಕುಮಾರ್ ಮಾತನಾಡಿ ಈ ಮೊದಲು ತಾಲೂಕು, ಹೋಬಳಿ ಮಟ್ಟದಲ್ಲಿ ಇದರ ಸೇವೆ ಸಿಗುತ್ತಿತ್ತು. ಇದೀಗ ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣ ಜನತೆಗೆ ಇದರ ಸೇವೆ ನೀಡುವ ನಿಟ್ಟಿನಲ್ಲಿ CSC ಸೆಂಟರ್ ತೆರೆಯಲಾಗಿದೆ.
ಸರ್ಕಾರ ನಿಗದಿ ಪಡಿಸಿದ ಧರದಲ್ಲಿ ರೇಷನ್ ಕಾರ್ಡ್, ಪಾನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ
ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರಿಂಟ್, ಸೇರಿದಂತೆ ಇನ್ನೂ ಅನೇಕ ಅರ್ಜಿಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಈ ಸಂದಂರ್ಭದಲ್ಲಿ ಮೇಲ್ವಿಚಾರಕರಾದ ಜ್ಯೋತಿ, ಸ್ಥಳೀಯ SP ಪಾರ್ವತಿ , ಮಾವಿನಭಾವಿ ಗ್ರಾಮದ ಹಿರಿಯರು ಹಾಗೂ ಪಂಚಾಯತ್ ಸದಸ್ಯರಾದ ಬಸನಗೌಡ, ರುದ್ರ ಗೌಡ, ಕನಕಪ್ಪ ವಾಲೇಕಾರ್, ರತ್ನಮ್ಮ, ಲಕ್ಷ್ಮೀಬಾಯಿ, ಮಲ್ಲಮ್ಮ, ಶರಣಮ್ಮ, ಮಂಜುನಾಥ, CSC ಕೇಂದ್ರದ ಟೈಪಿಸ್ಟ್ ಗೋಕುಲ್ ಸಾಬ VLE ಉಪಸ್ಥಿತರಿದ್ದರು.