ಜ- 13 ರಂದು ಇಂಡಿ ನಗರದಲ್ಲಿ ಲಿಂಬೆ ಬೆಳೆಗಾರರಿಂದ ಬೃಹತ್ ಹೋರಾಟ..!
ಇಂಡಿ: ನಿಂಬೆ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಜನವರಿ ೧೩ರಂದು ಬೆಳಗ್ಗೆ ೧೦ ಗಂಟೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಾಪಿ ವರ್ಗದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಿಂಬೆಯ ಪ್ರತಿವೊಂದು ಡಾಗ್ ಗೆ ೨೫೦೦ ಬೆಂಬಲ ಬೆಲೆ ಘೋಷಿಸಬೇಕು, ನಿಂಬೆ ಅಭಿವೃದ್ಧಿ ಮಂಡಳಿ ಮುಖಾಂತರವೇ ಖರೀದಿ ಕೇಂದ್ರ ಸ್ಥಾಪಿಸಬೇಕು, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಬೇಕು, ಬೇಸಿಗೆ ಸಮಯದಲ್ಲಿ ನಿಂಬೆ ಗಿಡಗಳು ಗುಣಗುವ ಹಂತದಲ್ಲಿದ್ದಾಗ ನಿಂಬೆ ಅಭಿವೃದ್ಧಿ ಮಂಡಳಿ ಮುಖಾಂತರ ಟ್ಯಾಂಕರ್ ಮೂಲಕ ಉಚಿತ ನೀರು ಒದಗಿಸಬೇಕು ಎಂಬ ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಿಂಬೆ ಬೆಳೆಗಾರರ ಹೋರಾಟ ಸಮಿತಿ ತಿಳಿಸಿದೆ.
ಹೋರಾಟಕ್ಕೆ ಬೆಂಬಲ : ನಿಂಬೆ ಬೆಳೆಗಾರರು ನಡೆಸಲು ತೀರ್ಮಾನಿಸಿರುವ ಹೋರಾಟಕ್ಕೆ ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ ಡಿ ಪಾಟೀಲ ಹಾಗೂ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಹನುಮಂತರಾಯಗೌಡ ಪಾಟೀಲ ಅವರು ತಮ್ಮ ಪಕ್ಷಗಳ ಪರವಾಗಿ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.
ರೈತ ಸಂಘಟನೆಯ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಅವರು ಸಹ ರೈತ ಸಂಘಟನೆ ವತಿಯಿಂದ ಬೆಂಬಲಿಸಿದ್ದು ಹೆಚ್ಚಿನ ರೈತರು ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


















