ಕಾನೂನು ವಾಪಸ್ ಪಡೆಯಲು ಆಗ್ರಹಿಸಿ, ಲಾರಿ
ಚಾಲಕರ, ಮಾಲಿಕರ ಬೃಹತ್ ಪ್ರತಿಭಟನೆ..!
ಇಂಡಿ : ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ
ಕಾನೂನು ಲಾರಿ ಚಾಲಕರಿಗೆ ಮಾರಕವಾಗಿದೆ. ಅದನ್ನು
ಈ ಕೂಡಲೇ ವಾಪಸ್ ಪಡೆದುಕೊಳ್ಳಬೇಕೆಂದು
ಆಗ್ರಹಿಸಿ, ಶುಕ್ರವಾರ ಇಂಡಿ ತಾಲ್ಲೂಕು ಲಾರಿ ಚಾಲಕರ
ಸಂಘದ ಅಡಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿಪತ್ರ ಸಲ್ಲಿಸಿತು.
ಲಾರಿ ಚಾಲಕರ ಸಂಘದ ಅಧ್ಯಕ್ಷ ಮೈಬೂಬ್
ಟಾಂಗೇವಾಲೆ ಮಾತನಾಡಿ, ಕೇಂದ್ರ ಸರಕಾರ
ಭಾರತೀಯ ನ್ಯಾಯ ಸಂಹಿತೆ (ಬಿಎನೆಸ್ 2023)
ಕಾಯ್ದೆಯನ್ನು ದಿನಾಂಕ 01-04-2024 ರಿಂದ
ಅನ್ವಯವಾಗುವಂತೆ ಜಾರಿ ಮಾಡಿದ್ದು, ಈ ಹೊಸ
ಕಾನೂನು ವ್ಯವಸ್ಥೆಯನ್ನು ವಾಹನ ಉದ್ಯಮಕ್ಕೆ
ಸಂಬಂಧಿಸಿದ ಹಲವು ನಿಯಮಗಳು ತುಂಬಾ
ಕಠಿಣವಾಗಿದ್ದು, ಅದರಲ್ಲೂ ಸೆಕ್ಷೆನ್ 106 (1) ಮತ್ತು
ಸೆಕ್ಷೆನ್ 106 (2) ಅಡಿಯಲ್ಲಿ ಯಾವದೇ ವಾಹನ
ಚಾಲಕರು ಅಪಘಾತವನ್ನು ಮಾಡಿ ಯಾವದೇ
ನಾಗರಿಕರ ಸಾವಿಗೆ ಕಾರಣವಾದರೆ ಚಾಲಕನಿಗೆ 10
ವರ್ಷಗಳ ವರೆಗೆ ಕಠಿಣ ಶಿಕ್ಷೆ ಮತ್ತು 7 ಲಕ್ಷಗಳ ವರೆಗೆ ದಂಡವನ್ನು ನ್ಯಾಯಾಲಯ ವಿಧಿಸಬಹುದಾಗಿದೆ.
ಲಾರಿ ಚಾಲಕರು ತಿಂಗಳಿಗೆ 12 ರಿಂದ 15 ಸಾವಿರ ಸಂಬಳ
ಪಡೆದುಕೊಂಡು ಕೆಲಸದಲ್ಲಿದ್ದೇವೆ. ಅಪಘಾತ ಸಂಭವಿಸಿದರೆ ದಂಡದ ಹಣ ಎಲ್ಲಿಂದ ಕಟ್ಟಲು ಸಾಧ್ಯ
ಎಂದು ಪ್ರಶ್ನಿಸಿರುವ ಅವರು ಸರಕಾರ ಈ ಕೂಡಲೇ
ಈ ಕಾಯ್ದೆಯ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ
ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ
ದೇಶದಾಧ್ಯಂತ ಲಾರಿ ಚಾಲಕರು ಲಾರಿ ಚಾಲನೆಯ
ಕೆಲಸ ಬಿಟ್ಟು ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಇದರ ಗಂಬೀರ ಪರಿಣಾಮ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಮುಕ್ತಾರ ಟಾಂಗೇವಾಲೆ, ಜಾವೀದ ಹೊನ್ನುಟಗಿ, ಉಮೇಶ ಹೊಸಮನಿ , ಅಂಬಣ್ಣ ಕಾಂಬಳೆ, ಖಾಜೇಸಾಬ ಬಾಗವಾನ, ಕರೀಮ ಮಾಶ್ಯಾಳಕರ, ಮುಸ್ತಾಕ ಗೌಂಡಿ, ಸೈಪನ್ ಬಾಗವಾನ, ಹುಸೇನಿ ಮಕಾಲೆ, ಮಾಂತೇಶ
ತೋಡಕರ, ಉದಯ ಗುಡಿಮನಿ , ಸಂತೋಷ
ಕಣ್ಣಿ, ಬಾಳುಸುಲಾಖೆ, ಶಂಕರಪೂಜಾರಿ, ಅಯೂಬ
ಶೇಖ, ನಾಸಿಕ್ ಬಾಗವಾನ, ಭೀಮಾಶಂಕರ ಬಿರಾದಾರ
ವಹಿಸಿಕೊಂಡಿದ್ದರು.
ಇಂಡಿ ಪಟ್ಟಣದಲ್ಲಿ ಶುಕ್ರವಾರ ಲಾರಿ ಚಾಲಕರು
ಕಾನೂನನ್ನು ಈ ಕೂಡಲೇ ವಾಪಸ್
ಪಡೆದುಕೊಳ್ಳಬೇಕೆಂದು ಆಗ್ರಹಿಸಿ, ಬೃಹತ್
ಪ್ರತಿಭಟನೆ ಮಾಡಿ ಎಸಿ ಅವರಿಗೆ ಮನವಿಪತ್ರ
ಸಲ್ಲಿಸಿದರು.