ಬಂಗಾರದ ವರ್ತಕರಿಂದ ಬೃಹತ್ ಪ್ರತಿಭಟನೆ
ಇಂಡಿ: ಇಂಡಿಯ ಸರಾಫ ಬಜಾರದ ಬಂಗಾರದ ವರ್ತಕರಾದ ಶ್ರೀಶೈಲ ಹಣಮಂತ ಅರ್ಜುಣಗಿ ಇವರನ್ನು ಸಿಂದಗಿಯ ಪೋಲಿಸರು ಸಿಂದಗಿಗೆ ತೆಗೆದುಕೊಂಡು ಹೋಗಿ ಸಿಂದಗಿಯ ಸಿ.ಪಿ ಐ ಅರ್ಜುಣಗಿ ಇವರ ಮೇಲೆ ಅಮಾನವೀಯ ಹಲ್ಲೆ ಮಾಡಿದ್ದಾರೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಇವರು ಸಿಂದಗಿಯವರ ಕಡೆಯಿಂದ ಬಂಗಾರ ತೆಗೆದುಕೊಂಡಿರುವ ಆರೋಪ ಮಾಡಿ ೨೭ ತಾಗುಗಳ ವರೆಗೆ ಠಾಣೆದಲ್ಲಿಯೇ ಕುಡಿಸಿ ಅಮಾನವೀಯ ಹಲ್ಲೆ ಮಾಡಿದ್ದಾರೆ.
ಈಗಾಗಲೇ ಪೋಲಿಸ ಇಲಾಖೆ ಚಿನ್ನ ಬೆಳ್ಳಿ ಕೆಲಸಗಾರರ ಮೇಲೆ ವಿನಾ ಕಾರಣ ದೂರು ದಾಖಲು ಮಾಡುವದು ಕಳ್ಳತನ ಪ್ರಕರಣಗಳ ತನಿಖೆ ನೆಪದಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಮೇಲೆ ದೌರ್ಜನ್ಯ ನಡೆಸುವದನ್ನು ತಡೆಗಟ್ಟಲು ಸುತ್ತೋಲೆ ಆಗಿದೆ. ಆದರೂ ಪೋಲಿಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸರಾಫ ಸಂಘದ ಅಧ್ಯಕ್ಷ ಸೋಮನಗೌಡ ಬಿರಾದಾರ, ಶ್ರೀಶೈಲ ಅರ್ಜುಣಗಿ, ರಮೇಶ ಪೊದ್ದಾರ, ವಿಜಯಕುಮಾರ ಮಹೀಂದ್ರಕರ, ಗಂಗಾಧರ ಬಡೀಗೇರ, ನಾಮದೇವ ಡಾಂಗೆ, ವಿಜಯಕುಮಾರ ಡಾಂಗಿ, ಸಚೀನ ಧನಶೆಟ್ಟಿ, ಸಂದೀಪ ಧನಶೆಟ್ಟಿ, ಶ್ರೀಮಂತ ವಳಸಂಗ ಮತ್ತಿತರಿದ್ದರು.
ಇಂಡಿಯ ಪೋಲಿಸ ಸ್ಟೇಷನ್ ಎದುರು ಬಂಗಾರದ ಅಂಗಡಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.


















