ಸಾಮೂಹಿಕ ವಿವಾಹಗಳೇ ಶ್ರೇಷ್ಠ – ಶ್ರೀಶೈಲ ಶ್ರೀಗಳು
ಇಂಡಿ : ಸಾಮೂಹಿಕ ವಿವಾಹಗಳು ಅರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜತೆಗೆ ಬಡ ಕುಟುಂಬಗಳನ್ನು ಸಂಕಷ್ಟದಿAದ ಪಾರು ಮಾಡುತ್ತವೆ. ನಾಡಿನ ಸಂತ ಶರಣ ಸ್ವಾಮೀಜಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಜ ಪಂಡಿತಾಚಾರ್ಯ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಾಂತೇಶ್ವರ ಜಾತ್ರೆಯ ನಿಮಿತ್ಯ ನಡೆದ ಸಾಮೂಹಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾಮೂಹಿಕ ವಿವಾಹ ಕೈಯಿಂದ ಆಗದವರ ಮದುವೆ, ಬಡವರ ಮದುವೆ ಎಂಬುದು ಶುದ್ಧ ತಪ್ಪು. ಮಧ್ಯಪ್ರದೇಶದ ಮುಖ್ಯಮಂತ್ರಿಯವರು ತಮ್ಮ ಮಗನ ಮದುವೆಯನ್ನು ಉಜ್ಜೆöÊನಿಯಲ್ಲಿ ಕೇವಲ ವಾರಹಿಂದೆ ಅಷ್ಟೇ ನಡೆದ ಸಾಮೂಹಿಕ ವಿವಾಹದಲ್ಲಿ ಮಾಡಿ ಆದರ್ಶ ರಾಗಿದ್ದಾರೆ. . ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ ಎಂದರು.
ಕುಟುAಬದಲ್ಲಿ ಮದುವೆಗಳು ಒಪ್ಪಂದದ ಪ್ರಕಾರ ನಡೆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಶಾಸ್ವತ ಪರಿಹಾರ ಕಂಡುಕೊಳ್ಳಬಹುದು. ಮದುವೆಯಾಗುವವರು ಎಲ್ಲರಿಗೂ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕಾಗಿದೆ. ಹಿಂದು ಧರ್ಮದವರು ಆರತಿಗೆ ಒಂದು ಕಿರ್ತಿಗೆ ಒಂದು ಎನ್ನುವ ಬದಲಾಗಿ ಹೆಚ್ಚು ಮಕ್ಕಳು ಹೆತ್ತು ಧರ್ಮದ ಬಲ ಹೆಚ್ಚಿಸುವ ಜವಾಬ್ದಾರಿ ನವ ಯುವಕರ ಮೇಲಿದೆ ಎಂದರು.
ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯರರು, ಜೈನಾಪುರದ ರೇಣುಕಾ ಶಿವಾಚಾರ್ಯರರು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರರು, ಶಿರಶ್ಯಾಡದ ಮುರಗೇಂದ್ರ ಶಿವಾಚಾರ್ಯರರು,ವೇದಮೂರ್ತಿ ಮರುಳಯ್ಯ ಶಾಸ್ತಿçÃಗಳು, ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ,ಸಿದ್ದು ಲಾಳಸಂಗಿ, ವೈ.ಜಿ.ಬಿರಾದಾರ ಮಾತನಾಡಿದರು.
ವೇದಮೂರ್ತಿ ಶಾಂತಯ್ಯ ಹಿರೇಮಠ, ವೇದಮೂರ್ತಿ ಅಜೀತ ಹಿರೇಮಠ, ಮಹಾಂತಯ್ಯ ಹಿರೇಮಠ, ಚಂದ್ರಕಾAತ ಪಂಡಿತ, ಪರಮಾನಂದ ಶ್ರೀಗಳು, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ನೀಲಕಂಠಗೌಡ ಪಾಟೀಲ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಸತ್ತಾರ ಬಾಗವಾನ, ಶ್ರೀಕಾಂತ ಕುಡಿಗನೂರ, ಅನೀಲಗೌಡ ಬಿರಾದಾರ, ಅಶೋಕ ಪಾಟೀಲ, ಅಪ್ಪು ಮಾನೆ, ಅಂತುಲೆ ರಹಮಾನ, ಭೀಮಣ್ಣ ಕವಲಗಿ, ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿ ಗೀತಾ ಗುತ್ತರಗಿಮಠ ಸಂತೋಷ ಗವಳಿ, ಯಲ್ಲಪ್ಪ ಹದರಿ, ಯಮನಾಜಿ ಸಾಳುಂಕೆ, ದೇವೆಂದ್ರ ಕುಂಬಾರ, ಅಶೋಕ ಹದಗಲ್ಲ, ಈರಣ್ಣ ಮೈದರಗಿ,ಮಂಜುನಾಥ ತೆನೆಹಳ್ಳಿ, ಶಿವಯೋಗಪ್ಪ ಚನಗೊಂಡ, ಬಿ.ಸಿ.ಸಾವಕಾರ, ಈರನಗೌಡ ಪಾಟೀಲ,ಮಲ್ಲು ಗುಡ್ಲ, ಸೋಮು ನಿಂಬರಗಿಮಠ , ಸಂಜು ನಾವಿ, ಸದಾಶಿವ ಪ್ಯಾಟಿ, ಇವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಕುಂಭ ಹೊತ್ತ ಮಹಿಳೆಯರಿಂದ ಮಹಾವೀರ ವೃತ್ತದಿಂದ ದೇವಸ್ಥಾನದ ವರೆಗೆ ಭವ್ಯ ಮೆರವಣೆಗೆ ನಡೆಯಿತು. ೧೯ ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂಡಿ ಪಟ್ಠಣದ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ



















