ಮಸ್ಕಿ : ಮಸ್ಕಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತದೊಂದಿಗೆ ಜಯಭೇರಿ ಸಾದಿಸುವ ಮೂಲಕ ಅಧಿಕಾರದ ಗದ್ದುಗೆ ತನ್ನದಾಗಿಸಿಕೊಂಡಿದೆ.ಸತತ ಮೂರನೇ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಒಟ್ಟು 23 ವಾರ್ಡ್‌ಗಳ ಪೈಕಿ ಬಿಜೆಪಿ 14 ಸ್ಥಾನ ಗೆಲ್ಲುವ ಮೂಲಕ ಚುನಾವಣೆಯಲ್ಲಿ ಪಾರುಪತ್ಯವನ್ನು ಸಾಧಿಸಿತು. ಕಾಂಗ್ರೆಸ್ ಕೇವಲ 09 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇನ್ನು ಜೆಡಿಎಸ್ ಒಂದೂ ಸ್ಥಾನದಲ್ಲಿ ಗೆಲ್ಲದೇ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತು.
ನಗರದದ ದೇವನಾಂಪ್ರೀಯ ಅಶೋಕ ಸರ್ಕಾರಿ
ಮಹಾವಿದ್ಯಾಲಯದಲ್ಲಿ
ಬೆಳಿಗ್ಗೆ 7-30 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಮೊದಲನೇ ಮತ ಎಣಿಕೆಯಲ್ಲಿ ಎರಡನೆಯ ವಾರ್ಡ್ನ ಬಿಜೆಪಿ ಅಭ್ಯರ್ಥಿ ರಮೇಶ್ ಖಾತೆಯನ್ನು ತೆರೆದರು. ಬೆಳಿಗ್ಗೆ 08 ಗಂಟೆಗೆ ಫಲಿತಾಂಶ ಹೊರಗಡೆ ಬೀಳುತ್ತಿದ್ದಂತೆ ಪಕ್ಷ ದ ಕಾರ್ಯಕರ್ತರು ಸಂಭ್ರಮಿಸಿದರು. ನಂತರ ಎಲ್ಲಾ ವಾರ್ಡ್ಗಳ ಫಲಿತಾಂಶ ಬಳಿಕ ಚುನಾವಣಾಧಿಕಾರಿ ವಿಜಯಶಾಲಿಗಳಿಗೆ ಪ್ರಮಾಣಪತ್ರ ವಿತರಿಸಿದರು.