ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾ ಪಂ ವ್ಯಾಪ್ತಿಯ ಭೀಮಾನದಿಯಲ್ಲಿ ಬೇಸಿಗೆಯ ನೀರಿನ ಅಭಾವದಿಂದಾಗಿ ನದಿಯಲ್ಲಿದ್ದ ಮರಳು ತೆರೆದು ಕೊಂಡಿದ್ದು ಇದನ್ನು ಕೆಲವು ಮರಳು ದಂಧೆಕೋರರು ಸಮಯ ಸಾಧಿಸಿಕೊಂಡು ರೂಢಿಯಂತೆ ( ಪ್ರತಿ ವರ್ಷದ ) ರಾತ್ರಿ ಸಮಯದಲ್ಲಿ ಮರಳನ್ನು ಸಂಗ್ರಹಿಸಬೇಕೆಂದು ದುರಾಸೆಯಿಂದ ಕಳೆದ ಕೆಲವು ದಿನಗಳಿಂದ ಯೋಜನೆ ಹಾಕುತ್ತಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದಾಗಿ ಮಣ್ಣೂರ ಗ್ರಾ. ಪಂ. ವ್ಯಾಪ್ತಿಯ ನೀರಿನ ಅಂತರ್ಜಲ ಮಟ್ಟ ಗಣನಿಯವಾಗಿ ಪಾತಾಳಕ್ಕೆ ಇಳಿದಿದ್ದು, ಅಂತರ್ಜಲ ಮಟ್ಟ ಇಳಿಕೆಯಿಂದಾಗಿ ಕುಡಿಯುವ ನೀರಿಗೆ, ಪ್ರಾಣಿಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುತ್ತಿದೆ.
ಉಳಿಮೇಗಾಗಿ ಹಾಗೂ ಪರಿಸರ ಸರಕ್ಷಣೆಗಾಗಿ ಭೀಮಾನದಿ ಉಳಿಯುವಿಗಾಗಿ ಪ್ರಯತ್ನ ಮಾಡಬೇಕಾಗಿದೆ. ಆದ್ದರಿಂದ ಮಣ್ಣೂರ ಗ್ರಾ ಪಂ ಗ್ರಾಮದಲ್ಲಿ ಆಕ್ರಮ ಮರಳುಗಾರಿಕೆಯ ತಡೆಗಟ್ಟುವ ಸಲುವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಬೇಕಿದೆ. ಕಂದಾಯ ಇಲಾಖೆಯ ನೇತೃತ್ವದಲ್ಲಿ ವಿಶೇಷ ಜಾಗೃತದಳ ರಚಿಸಿಕೊಂಡು ಮಣ್ಣೂರ ಗ್ರಾ. ಪಂ. ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನೀಗಾವಹಿಸಿ ಆಕ್ರಮ ಮರಳುಗಾರಿಕೆಯನ್ನು ತಡೆಗಟ್ಟಬೇಕು ಎಂದು ಅಖಿಲ ಭಾರತೀಯ ಭ್ರಾಷ್ಟಾಚಾರ ನಿರ್ಮೂಲನ ಸಂಘರ್ಷ ಸಮಿತಿ ರಾಜ್ಯ ಕಾರ್ಯದರ್ಶಿ ಸಂತೋಷ ಗೋಪಗೊಂಡ ಹಾಗೂ ಭ್ರಾಷ್ಟಾಚಾರ ನಿರ್ಮೂಲನ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಅಮೋಲ ಮೋರೆ ತಾಲೂಕಿನ ತಹಸಶೀಲ್ದಾರ ಹಾಗೂ ಸಿಪಿಐ ಅವರಿಗೆ ಮಾಡಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.