ಹುಬ್ಬಳ್ಳಿ: ನಗರದ ಚನ್ನಮ್ಮ ಸರ್ಕಲ್ದಲ್ಲಿ ಯುವಕನೊಬ್ಬ ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದ ವೇಳೆಯಲ್ಲಿ ಪೊಲೀಸರು ಯುವಕನಿಗೆ, ಕೀ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರ ಮೂಲದ ನಾಗರಾಜ ಮೂರ್ಛೆ ರೋಗದಿಂದ ಬಿದ್ದಿದ್ದ ಯುವಕನಾಗಿದ್ದು. ಬೆಳಗ್ಗೆಯಿಂದ ಏನು ತಿನ್ನದ ಕಾರಣ ಹೀಗೆ ಆಗಿದೆ ಎಂದು ಯುವಕ ತಿಳಿಸಿದ್ದಾನೆ. ಇನ್ನು ಗಂಡು ಮೆಟ್ಟಿನ ನಾಡಿನ ಪೊಲೀಸರ ಮಾನವೀಯತೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.



















