ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಉಂಟಾಗುತ್ತಿದೆ : ಅರವಿಂದ
ವಿಜಯಪುರ, ಸೆ. 05: ಮಕ್ಕಳಲ್ಲಿ ಕಂಡುಬರುತ್ತಿರುವ ಪೌಷ್ಟಿಕತೆಯ ಕೊರತೆ ಕುರಿತು ಪಾಲಕರಲ್ಲಿ ಅರಿವು ಮೂಡಿಸುವದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಗರಗಿ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ. ವ್ಹಿ. ಎಸ್ ಆಯುರ್ವೇದ ಮಹಾವಿದ್ಯಾಲಯ ಕೌಮಾರಭೃತ್ಯ ವಿಭಾಗದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ದಿ ಸಹಯೊಗದಲ್ಲಿ ಶಿಶು ಅಭಿವೃದ್ದಿ ಯೋಜನೆ ಅಂಗವಾಗಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಮತ್ತು ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಹಾಗೂ ಮಕ್ಕಳ ಆರೊಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಉಂಟಾಗುತ್ತಿದೆ. ಈ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳ ಮೂಲಕ ಹಾಗೂ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದೊಂದಿಗೆ ಜನಸಾಮಾನ್ಯರಲ್ಲಿ ಆಯುರ್ವೆದಿಯ ಪೊಷಣಮುಕ್ತ ಆಹಾರ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನಿಯ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿ, ಮಕ್ಕಳ ಸರ್ವಾಂಗಿಣ ಅಭಿವೃದ್ದಿಗೆ ಅಗತ್ಯವಾಗಿರುವ ಕೆಲಸ ಕಾರ್ಯಗಳಿಗೆ ಮಹಾವಿದ್ಯಾಲಯದ ಕೌಮಾರಭೃತ್ಯ ವಿಭಾಗ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ನಂತರ ಆಗಮಿಸಿದ 50 ಮಕ್ಕಳಿಗೆ ಕೌಮಾರಭೃತ್ಯ ವಿಭಾಗ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷದ ವಿತರಣೆ ಮಾಡಲಾಯಿತು. ಅಲ್ಲದೇ, ಈ ಕಾರ್ಯಕ್ರಮದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮತ್ತು ಮಕ್ಕಳಿಗೆ ಅನ್ನಪ್ರಾಶನ ಸಂಸ್ಕಾರ, ಪ್ರತಿ ತಾಯಿಗೊಂದು ಗಿಡ ಅನ್ನೊ ಎಂಬ ಧ್ಯೇಯ ವಾಕ್ಯದೊಂದಿಗೆ ಮಹಾವಿದ್ಯಾಲಯದ ಶ್ರೀವನದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಜಿಗಳೂರ, ಡಾ. ಜಾವೇದ ಬಾಗಾಯತ, ಕೆ. ಕೆ. ಚವ್ಹಾಣ, ಅರವಿಂದ ಹಗರಗಿ, ಡಾ. ಕೆ. ಎ. ಪಾಟೀಲ, ಅನಿಲ ಹಳ್ಳಿ, ಡಾ. ವಿಜಯಲಕ್ಷ್ಮಿಬೆನಕಟ್ಟಿ, ಡಾ. ದೌಲಬಿ ಚೌಧರಿ, ಹೈದರಖಾನ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ
ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಪೋಷಣ ಮಾಸಾಚರಣೆ ಮತ್ತು ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಹಾಗು ಮಕ್ಕಳ ಆರೊಗ್ಯ ತಪಾಸಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧಿಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಗರಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಸಂಜಯ ಕಡ್ಲಿಮಟ್ಟಿ, ಬಸವರಾಜ ಜಿಗಳೂರ, ಡಾ. ಜಾವೇದ ಬಾಗಾಯತ, ಕೆ. ಕೆ. ಚವ್ಹಾಣ, ಅರವಿಂದ ಹಗರಗಿ, ಡಾ. ಕೆ. ಎ. ಪಾಟೀಲ, ಅನಿಲ ಹಳ್ಳಿ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ದೌಲಬಿ ಚೌಧರಿ, ಹೈದರಖಾನ ಮುಂತಾದವರು ಉಪಸ್ಥಿತರಿದ್ದರು.