ಲಚ್ಯಾಣದಲ್ಲಿ ಮಂಗಳವಾರ ಜರುಗಿದ ಶ್ರೀ
ಮಲ್ಲಯ್ಯ ಮಂದಿರದ ನೂತನ ಕಟ್ಟಡ
ಭೂಮಿ ಪೂಜಾ ಸಮಾರಂಭ ಜರುಗಿತು.
ಶ್ರೀ ಮಲ್ಲಯ್ಯ ಮಂದಿರ ಕಟ್ಟಡಕ್ಕೆ ಭೂಮಿ
ಪೂಜೆ
ಇಂಡಿ : ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿನ ಹೃದಯಭಾಗದಲ್ಲಿನ ಶ್ರೀ ಮಲ್ಲಯ್ಯದೇವರ ಛಟ್ಟಿ ಜಾತ್ರೋತ್ಸವ ಅಂಗವಾಗಿ ಸೋಮವಾರ ಸಂಜೆ ನೂತನ
ದೇವಸ್ಥಾನದ ಭೂಮಿ ಪೂಜೆ,ವಿವಿಧ ಧಾರ್ಮಿಕ
ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜರುಗಿತು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ
ಭೂಮಿ ಪೂಜೆ ನೆರವೆರಿಸಿದ ಬಳಿಕ ಸಭಿಕರನ್ನು ಉದೇಶಿಸಿ ಮಾತನಾಡಿ, ಸುಕ್ಷೆತ್ರ ಲಚ್ಯಾಣ ಕ್ಷೇತ್ರದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಅಮೃತ ಹಸ್ತದಿಂದ ಜೀರ್ಣೋದ್ಧಾರಗೊಂಡ ಶ್ರೀ ಮಲ್ಲಯ್ಯ
ಮಂದಿರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅಗತ್ಯವಾದ ಹಣಕಾಸಿನ ನೆರವು ನೀಡುತ್ತೇನೆ. ಗ್ರಾಮದ ಹಿರಿಯ ಮನವಿಯಂತೆ 11 ಲಕ್ಷ ರೂಪಾಯಿ ಧನ ಸಹಾಯ ಸಲ್ಲಿಸುತ್ತೇನೆ. ಇದಲ್ಲದೆ ಮಠದಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ಗರ್ಭ ಗುಡಿಯ ಮೇಲೆ ನೂತನವಾಗಿ
ನಿರ್ಮಿಸುತ್ತಿರುವ ಶಿಖರದ ಕಾರ್ಯಕ್ಕೆ ಭಕ್ತಿ ಪೂರ್ವಕವಾಗಿ ಪ್ರಥಮ ಹಂತದಲ್ಲಿ 25 ಲಕ್ಷ
ರೂ. ಧನ ಸಹಾಯ ಮಾಡುತ್ತೇನೆ ಎಂದು
ಭರವಸೆ ನೀಡಿದರು.
ಈ ಕಾರ್ಯಕ್ರಮದ ಸಾನಿಧ್ಯವಹಿಸಿದ ಬಂಥನಾಳದ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಮಾತನಾಡಿ, ಬಂಥನಾಳದ ಪೂಜ್ಯ ಶಂಕರಲಿಂಗ ಮಹಾ ಶಿವಯೋಗಿಗಳ ಶಿಷ್ಯ ಸಿದ್ಧಲಿಂಗ ಮಹಾರಾಜರು
ಜೀರ್ಣೋದ್ದಾರಗೈದ ದೇವಾಲಯದ ರಕ್ಷಣೆಗೆ ಭಕ್ತರು ಶ್ರಮಿಸುತ್ತಿರುವದು ಶ್ಲಾಘನೀಯ. ಎಲೆಯ ಮರೆಯ
ಕಾಯಿಯಂತೆ ಮಠದಲ್ಲಿ ಹಲವು ವರ್ಷ ಪಾತ್ರೆ
ತೊಳೆಯುವ ಕೆಲಸ ಮಾಡಿದ ದುಂಡವ್ವ ತಳವಾರ ಇವರಿಗೆ ಸೂರು ಕಟ್ಟಿಕೊಳ್ಳಲು 25 ಸಾವಿರ ರೂ. ಹಣ ನೀಡಲಾಗುವದು ಎಂದರು.
ಯರನಾಳದ ಗುರು ಸಂಗನಬಸವ ಮಹಾಶಿವಯೋಗಿಗಳು ಮಾತನಾಡಿ, ಮಂದಿರಗಳು ದೇವರನ್ನು ತಲುಪುವ ಮೊದಲ ಮೆಟ್ಟಿಲುಗಳು. ಯಾವು ಕಥೆಯಲ್ಲಿ ಇದೆ ಅದಕ್ಕೆ ಶಕ್ತಿ ಕೊಟ್ಟು ಬೆಳಕಿಗೆ ತರಬೇಕು. ಇದುವೆ ನಿಜವಾದ ಧರ್ಮಎಂದರು. ತದ್ದೇವಾಡಿಯ ಹಿರೇಮಠದ ಮಹಾಂತೇಶ ಶಾಸ್ತ್ರಿ, ಬಿಜೆಪಿ ಮುಖಂಡ ರವಿ ಖಾನಾಪುರ, ನಿವೃತ್ತ ಶಿಕ್ಷಕ ಡಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೇಶನ ದಾನಿಗಳನ್ನು
ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸ್ಪಾಟ್ ಲೈಟ್ ಕಲಾತಂಡದ ಕಲಾವಿದರಾದ ಮಹಾನ್ಯಾ ಪಾಟೀಲ, ಜ್ಯೂನಿಯರ್ ವಿಷ್ಣುವರ್ಧನ ರವಿ ಕೋರಿ ಹಾಗೂ ಸಹಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ವೇ. ಮಲ್ಲಯ್ಯ ಮಠಪತಿ, ಯುವ ದುರೀಣ ಯಶವಂತ ಬಿರಾದಾರ, ಯುವ ದುರೀಣ ಸುನೀಲಗೌಡ ಬಿರಾದಾರ, ನಿವೃತ್ತ ಶಿಕ್ಷಕ ವಿಠ್ಠಲ ಕರಾಳೆ, ಗ್ರಾಮದ ಗಣ್ಯರಾದ ಎಂ.ಎಸ್. ಮುಜಗೊಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ,
ಸುಭಾಸಗೌಡ ಪಾಟೀಲ, ಮಲ್ಲೇಶಿ ಕರಾಳೆ ಉಪಸ್ಥಿತರಿದ್ದರು. ಜಿ.ಕೆ. ಲಾಳಸೇರಿ ಸ್ವಾಗತಿಸಿದರು. ಧನರಾಜ ಮುಜಗೊಂಡ ಕಾರ್ಯಕ್ರಮ ನಿರೂಪಿಸಿದರು.