ಮಳಖೇಡದ ವೃಂದಾವನದ ಬಗ್ಗೆ ಅಪಪ್ರಚಾರಕ್ಕೆ ಖಂಡನೆ..!
ಅಫಜಲಪುರ: ಮಧ್ವ ಸಿದ್ದಾಂತರದ ಪರಂಪರೆಯಲ್ಲಿನ ಶ್ರೀ ಜಯತೀರ್ಥರ ಮೂಲವೃಂದಾವನವು ಸೇಡಂ ತಾಲೂಕಿನ ಮಳಖೇಡದಲ್ಲಿದ್ದರೂ ಕೂಡ ಕೆಲವು ಕಿಡಿಗೇಡಿಗಳು ಗಂಗಾವತಿ ತಾಲೂಕಿನ ಯಾನಾಗುಂದಿಯಲ್ಲಿದೆ ಎಂದು ಕೆಲವರು ಅಪಪ್ರಚಾರ
ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ಪಂಡಿತ ಸರ್ವೇಶ ಅಕಮಂಚಿ ಖಂಡಿಸಿದರು. ಅವರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಜಯತೀರ್ಥರ ಭಕ್ತವೃಂದದೊಂದಿಗೆ ಶಾಂತ ಪ್ರತಿಭಟನೆ ನಡೆಸಿ ತಹಶಿಲ್ದಾರ ಸಂಜೀವಕುಮಾರ ದಾಸರ್ ಅವರ ಮುಖಾಂತರ ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡುತ್ತಾ ಶತಮಾನಗಳಿಂದ ಜಯತೀರ್ಥರ ವೃಂದಾವನ
ಇರುವುದು ಮಳಖೇಡದಲ್ಲಿ ಎಂದು ಇತಿಹಾಸ ಸಾಕ್ಷಿಯಾಗಿದೆ. ಇಷ್ಟೇಲ್ಲ ಇದ್ದರೂ ಕೂಡ ಕೆಲವು ನಮ್ಮಲ್ಲಿನವರೇ ಕಿಡಿಗೇಡಿಗಳು ಇತಿಹಾಸವನ್ನು ತಿರುಚುವ ದುಸ್ಸಾಹಸ ಮಾಡುತ್ತಿದ್ದಾರೆ. ಇಂತವರ ಮೇಲೆ ಕೊಪ್ಪಳ ಜಿಲ್ಲಾಡಳಿತ ಅಥವಾ ಸರ್ಕಾರ ಕಠಿಣ ಕ್ರಮ ಕೈಗೊಂಡು ಇತಿಹಾಸವನ್ನು ತಿರುಚುವ ಕುಹಕಿಗಳಿಗೆ
ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಉಪೇಂದ್ರ ಪಾಟೀಲ್, ದತ್ತಾತ್ರೇಯರಾವ್ ನಿಂಬಾಳ, ಸಂತೋಷ ಘೂಳನೂರ, ಪ್ರಲ್ಹಾದರಾವ್ ಬಿಲ್ವಾಡ, ಅಚಿಜನಾ ಕುಲಕರ್ಣಿ, ಸುನಿತಾ ಆಲಬಾಳ, ಪೂರ್ಣಿಮಾ ಬಿಲ್ವಾಡ, ಲತಾ ಕುಲಕರ್ಣಿ, ಗುರುರಾಜರಾವ್ ಕುಲಕರ್ಣಿ, ಗುರುರಾಜರಾವ್ ಮೈಂದ್ರಿಗಿಕರ, ಚೇತನ ಕುಲಕರ್ಣಿ, ಕೇಶವ ಕಟಾವೆ, ರಾಘು ಕಟಾವೆ, ಅಶ್ವಿನಿ ಕಟಾವೆ, ರಾಜು ಬಗಲೂರ, ಪವನ ಆಲಬಾಳ, ಜಗನ್ನಾಥ ಕುಲಕರ್ಣಿ ಸೇರಿದಂತೆ ಜಯತೀರ್ಥರ ಭಕ್ತವೃಂದದವರು ಇದ್ದರು.