ಲಿಂಗಸೂಗೂರು:ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಹಾಳ ಸರಕಾರಿ ಪ್ರೌಢ ಶಾಲೆಯಲ್ಲಿ 15-18 ವರ್ಷದ ಮಕ್ಕಳಿಗೆ ಕೊವೀಡ್ ಲಸಿಕಾ ಅಭಿಯಾನಕ್ಕೆ ಗ್ರಾ.ಪಂ.ಅಧ್ಯಕ್ಷರಾದ ಈರಮ್ಮ ರಾಮಣ್ಣ ಭೋವಿ ಉದ್ಘಾಟನೆ ಮಾಡಿದರು.

ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಹೆಚ್.ಬಿ.ತಳ್ಳಳ್ಳಿ ಮಾತನಾಡಿ, ಈಗಾಗಲೇ 18 ವರ್ಷ ಮೆಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗಿದೆ. ಇದೀಗ 15-18 ವರ್ಷದ ವಿಧ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಎಲ್ಲಾ ವಿಧ್ಯಾರ್ಥಿಗಳು ಲಸಿಕೆಯನ್ನು ಪಡೆಯಬೇಕು. ಮೊದಲೆರಡು ಅಲೆಗಳಿಗಿಂತ 3 ನೇ ಅಲೆ ಅತೀ ವೇಗವಾಗಿ ಸೋಂಕು ಹರಡುತ್ತದೆ. ಕರೋನಾ ಮಣಿಸಲು ಲಸಿಕೆ ಅನಿವಾರ್ಯವಾಗಿದೆ ಎಂದರು. ಈ ವೇಳೆ ಗ್ರಾ.ಪಂ.ಉಪಾಧ್ಯಕ್ಷರಾದ ಲಕ್ಷ್ಮಮ್ಮ ಮಸೂತಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಶಾಲೆಯ ಶಿಕ್ಷಕರು,ಎಸ್.ಡಿ.ಎಂ.ಸಿ ಅಧ್ಯಕ್ಷರು,ಆಶಾ ಕಾರ್ಯಕರ್ತೆಯರು,ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.



















