VOJ ನ್ಯೂಸ್ ಡೆಸ್ಕ್ : ಅಂಗೀಯ ಮ್ಯಾಲಂಗಿ ಚೆಂದೇನೋ ನನರಾಯ ರಂಬೀಯ ಮ್ಯಾಲಾ ಪ್ರತಿ ರಂಬಿ ಬಂದರೆ ಚೆಂದೇನೋ ರಾಯ ಮನಿಯಾಗ ಎಂಬ ಮಾತಿದೆ.
ಈ ಮಾತಿಗೆ ಪುಷ್ಟಿ ನೀಡುವಂತೆ ಇಲ್ಲೊಬ್ಬ ನೌಕರ ಬೇರೊಂದು ಹೆಣ್ಣಿನ ಸಹವಾಸ ಮಾಡಿ ತಗಲಾಕ್ಕೊಂಡಿದ್ದಾನೆ.
ಸರಕಾರಿ ಸಬ್ ರಿಜಿಸ್ಟ್ರಾರ್ ಅಧಿಕಾರಿ ಒಬ್ಬ ಎರಡು ಮಕ್ಕಳು ಇದ್ರೂ, ಕೂಡ ಪರಸ್ತ್ರಿ ಸಹವಾಸ ಮಾಡಿ ಆಕೆಯನ್ನು ಮದುವೆ ಮಾಡಿಕೊಂಡು ಆಕೆಗೂ ಒಂದು ಮಗು ಕರುಣಿಸುವ ಮೂಲಕ ಈ ಅಧಿಕಾರಿ ವಿವಾದಕ್ಕೆ ಸಿಲುಕಿದ್ದಾನೆ.
ಹೀಗೆ ಪೋಟೋದಲ್ಲಿ ತನ್ನ ಎರಡನೇ ಹೆಂಡ್ತಿ ಜೊತೆಗೆ
ಭರ್ಜರಿ ಪೋಸ್ ಕೊಡ್ತಿರೋ ಇವರು ಬಳ್ಳಾರಿ ಸಬ್
ರಿಜಿಸ್ಟರ್ ಉಮೇಶ್.
ದಾವಣಗೆರೆ ಮೂಲದ ಉಮೇಶ ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಹಲವು ವರ್ಷದಿಂದ ಕೆಲಸ ಮಾಡ್ತಿದ್ದಾರೆ. ಭರ್ಜರಿ ಸಂಬಳ ಜೊತೆಗೊಂದಿಷ್ಟು ಗಿಂಬಳ ಇದ್ರೂ ಇವರಿಗೆ ಬೆಂಗಳೂರು, ಮುಂಬೈ ಮತ್ತು ಡೆಲ್ಲಿಯಲ್ಲಿರೋ ಬಾರ್ ಗರ್ಲ್ಸ್ಗಳ ಸಂಪರ್ಕವಿತ್ತು.
ಹೀಗೆ ಸಂಪರ್ಕ ಪ್ರೇಮಕೆ ತಿರುಗಿದ ಹಿನ್ನೆಲೆ ನಜೀನ್ ಖಾನ್ ಎನ್ನುವ ಮಹಿಳೆಯ ಜೊತೆಗೆ ಮದುವೆಯಾಗಿದ್ದಾನೆ. ಆಕೆಗೆ ಬಳ್ಳಾರಿಯಲ್ಲೊಂದು ಫ್ಲಾಟ್ ಕೊಟ್ಟು ಎರಡು ವರ್ಷ ಸಂಸಾರ ನಡೆಸಿದ ಬಳಿಕ ಇದೀಗ ಕೈಕೊಡಲು ಮುಂದಾಗಿದ್ದಾನೆ. ಹೀಗಾಗಿ ಮಹಿಳಾ ಠಾಣೆಯಲ್ಲಿ ದೂರು ನೀಡಿರೋ ನಜೀನ್ ಖಾನ್ ಇದೀಗ ನಿತ್ಯ ಸಬ್ರಿಜಿಸ್ಟ್ರಾರ್ ಕಚೇರಿ ಅಲೆಯುತ್ತಿದ್ದಾಳೆ.