ಲಿಂಗಸೂಗೂರು: ಪಟ್ಟಣದ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ಪೂಜ್ಯ ಶ್ರೀ ನಿ. ಪ್ರ. ಗುರುಮಹಾಂತ ಮಹಾಸ್ವಾಮಿಗಳು ಇಲಕಲ್ಲ ಇವರ ದಿವ್ಯ ಸಾನಿಧ್ಯದಲ್ಲಿ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ದಾವಣಗೆರೆ ಇವರು ಆಯೋಜಿಸಿದ 14 ನೇ ಶರಣತತ್ವ ಕಮ್ಮಟ ಕಾರ್ಯದಲ್ಲಿ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು ಮಾಜಿ ಶಾಸಕರು ಡಾ. ಮಾನಪ್ಪ ಡಿ ವಜ್ಜಲ್ ರವರು ಭಾಗವಹಿಸಿದ್ದರು.
ಈ ವೇಳೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ
ನಮ್ಮ ಜೀವನವನ್ನು ಶರಣರ ಕಾಯಕ ತತ್ವಕ್ಕೆ ಬದ್ಧರಾಗಿಸಿ ನಮ್ಮ ಕಾಯಕವನ್ನು ಬಸವಾದಿ ಪ್ರಮಥರ ಮಾರ್ಗದರ್ಶನಲ್ಲಿ ದುಡಿದು ನಡೆ-ನುಡಿಗಳನ್ನು ಒಂದಾಗಿಸಿಕೊಂಡು ಜೀವನದ ಪ್ರತಿ ಕ್ಷಣವು ಬಸವಣ್ಣನವರ ಸ್ಮರಣೆ ಮಾಡಿಕೊಂಡು ಬದುಕುವುದೆ ಶ್ರೇಷ್ಠ ಕಾಯಕವಾಗಿದೆ. ಪ್ರಭುದೇವರು, ಬಸವಣ್ಣನವರು ಮತ್ತು ಇಡಿ ಅನುಭವ ಮಂಟಪದ ಶರಣರ ಬದುಕಿನ ಪ್ರಾಮುಖ್ಯತೆ, ಸತ್ಯ, ನಿಷ್ಠೆ, ಸಮಾನತೆ, ಸಾಮಾಜಿಕ ಕಳಕಳಿಯನ್ನು ಶರಣರು ಅಳವಡಿಸಿಕೊಂಡಿದ್ದರು.
ಈ ನಿಟ್ಟಿನಲ್ಲಿ ಜೀವನವನ್ನು ಸಾಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್,ವೀಶ್ವನಾಥ ಸಕ್ರಿ, ವೀರಣ್ಣ ಹುರಕಡ್ಲಿ, ಮಲ್ಲಯ್ಯಸ್ವಾಮಿ ಪುರಣಿಕಮಠ, ಬಸವರಾಜ ಐದನಾಳ, ದ್ಯಾಮಣ್ಣ ನಾಯಕ ಮತ್ತಿತರರು ಭಾಗವಹಿಸಿದ್ದರು.