ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿಯ ಆಚರಣೆ
ರಾಯಚೂರು : ತಾಲೂಕಿನ ಹೀರಾಪೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತೋತ್ಸ – ವವನ್ನು ಶಾಲಾ ಅವರಣದಲ್ಲಿ ಮತ್ತು ಶಾಲಾ ಸುತ್ತಮುತ್ತ ಶಿಕ್ಷಕರು ವಿದ್ಯಾರ್ಥಿಗಳು ಸೇರಿ ಶ್ರಮದಾನ ಮಾಡಿ ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಸಕ್ರೆಪ್ಪ.ಕೆ. ಗೋನಾಳ ಮಾತನಾಡಿ ಗಾಂಧೀಜಿಯವರ ಸತ್ಯ,ಅಹಿಂಸೆಯ ಮೂಲಕ ಅವರು ಹೋರಾಡಿದ ಹೋರಾಟಗಳ ಬಗ್ಗೆ ಸ್ಮರಿಸಿದರು, ಹಾಗೆಯೇ ಶಾಸ್ತ್ರಿ ಅವರು ನಮ್ಮ ದೇಶದ ಎರಡನೇ ಪ್ರಧಾನಮಂತ್ರಿಯ ಅತ್ಯಂತ ಸರಳ ಸಜ್ಜನಿಕೆ ವ್ಯಕ್ತಿಯಾಗಿ ಗುರುತಿಸಿಕೊಳ್ಳು – ವದರ ಮೂಲಕ ನಮ್ಮ ರಾಷ್ಟ್ರ ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಇಂತಹ ಮಹಾನ್ ವ್ಯಕ್ತಿಗಳ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಶಂಕರಗೌಡ. ಪೂ!!ಪಾ, ಪಂಪನಗೌಡ,ಬಸವರಾಜ, ನರಸಿಂಹ, ಮಲ್ಲನಗೌಡ ಪಾಟೀಲ್ ಶ್ರೀಮತಿ ಸಾವಿತ್ರಿ, ಈರಮ್ಮ, ಲಕ್ಷ್ಮಿ, ಅಸ್ಮತ್ ಬೇಗಮ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.