ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ಅನುಸರಿಸುತ್ತೆದೆ; ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ
ಇಂಡಿ : ಸತ್ಯ ಹಾಗೂ ಅಹಿಂಸೆಯನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರು ಹೆಮ್ಮ ಪಡುವ ವಿಚಾರ. ಅದಲ್ಲದೇ ಇಡೀ ಜಗತ್ತು ಮಹಾತ್ಮ ಗಾಂಧೀಜಿಯನ್ನು ಅನುಸರಿಸುತ್ತೆದೆ ಎಂದು ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧಿಜೀ ಹಾಗೂ ಲಾಲ ಬಹಾದ್ದೂರ ಜಯಂತಿ ಆಚರಿಸಿ ಮಾತಾನಾಡಿದರು. ಯಾವ ದೇಶದ, ಯಾವ ಮಹಾನ ವ್ಯಕ್ತಿ ಅಗಲಿರುತ್ತಾನೊ..! ಆ ರಾಷ್ಟ್ರ ಮಾತ್ರ ಧ್ವಜಾರೋಹಣ ನೆರೆವರಿಸುತ್ತೆದೆ. ಆದರೆ ಮಹಾತ್ಮ ಗಾಂಧಿಜೀಯವರು ಅಗಲಿದ್ದಾಗ ವಿಶ್ವ ಸಂಸ್ಥೆ ಹಾಗೂ ಇಡೀ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಧ್ವಜಾರೋಹಣ ನೆರೆವರಿಯಿತು. ಮಹಾತ್ಮ ಗಾಂಧಿಜೀ ಅವರು ಕೇವಲ ನಮ್ಮ ರಾಷ್ಟ್ರಕ್ಕೆ ಅಲ್ಲಾ,
ಇಡೀ ಜಗತ್ತಿಗೆ ಸತ್ಯೆ , ಅಹಿಂಸೆ ಬಗ್ಗೆ ತಿಳಿಸಿದವರು. ಹಾಗಾಗಿ ಅವರ ಆದರ್ಶ ತತ್ವ ಎಲ್ಲರೂ ಪರಿಪಾಲನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಶಿಲ್ದಾರ ಧನಪಾಲ ಶೆಟ್ಟಿ , ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ, ಆರ್.ಬಿ ಮೂಗಿ, ಎಸ್.ಆರ್ ಮುಜಗೊಂಡ, ಕಂದಾಯ ನಿರೀಕ್ಷಕ ಎಚ್.ಎಚ್ ಗುನ್ನಾಪುರ, ಸಂಕೇತ ಪಾಟೀಲ, ಗ್ರಾಮ ಲೇಕಾಧಿಕಾರಿ ಪ್ರಕಾಶ ಚವಡಿಹಾಳ, ವಿರೇಶ ಜೇ ಇನ್ನೂ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.