ಬುಡಕಟ್ಟು ಜನಾಂಗ ಮಕ್ಕಳಿಗಾಗಿ ವಸತಿ ಶಾಲಾ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರವೆರಿಸಿದ ಶಾಸಕ ಎಮ್ ಆರ್ ಮಂಜುನಾಥ್.
ಹನೂರು : ತಾಲೂಕಿನ ಗಾಣಿಗಮಂಗಲ ಗ್ರಾಮದಲ್ಲಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಎಂಆರ್ ಮಂಜುನಾಥ್ ರಿಂದ ಭೂಮಿ ಪೂಜೆ ಮಾಡಲಾಯಿತು. ಹನೂರು ತಾಲ್ಲೂಕಿನ
ಕಾಡಂಚಿನ ಗ್ರಾಮವಾದ ಗಾಣಿಗಮಂಗಲದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು .
ನಂತರ ಮಾತನಾಡಿದ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆದಿವಾಸಿ ಜನಾಂಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಲೆ ಮಹದೇಶ್ವರ ಬೆಟ್ಟ ,ಕೋಣನಕೆರೆ ,ಪೊನ್ನಾಚಿ, ಹಿರಿಯಹಂಬಲ, ಬೈಲೂರು, ಕಂಚಗಳ್ಳಿ ,ನಕ್ಕುಂದಿ, ಗಾಣಿಗಮಂಗಲ,ಜೀರಿಗೆ ಗದ್ದೆ ಸೇರಿದಂತೆ 9 ಗಿರಿಜನ ಆಶ್ರಮ ಶಾಲೆಗಳನ್ನು ನಿರ್ಮಾಣ ಮಾಡಿ 650 ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆದ್ದರಿಂದ ಆದಿವಾಸಿ ಸಮಾಜದವರು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿದ್ಯಾವಂತರಾಗಿ ಮಾಡಬೇಕು ,ಸರ್ಕಾರ ನಗರ ಪ್ರದೇಶಗಳಲ್ಲಿರುವ ಮಕ್ಕಳಂತೆ ನಿಮ್ಮ ಮಕ್ಕಳಿಗೂ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಸಂತೋಷ ತಂದಿದೆ.ಇಂತಹ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಸ್ಥಾನಕ್ಕೆರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಗ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರತಪ್ಪ, ಉಪಾಧ್ಯಕ್ಷೆ ಮಹದೇವಮ್ಮ,ಜಿಲ್ಲಾ
ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಸಿ ಮಠದ್, ಸಹಾಯಕಕಾರ್ಯಪಾಲಕ ತನುಜ್ ಕುಮಾರ್ ಕೆ.ಎನ್. ಎಇ ಮಂಜು ನಾಯಕ್,ತಾಲೂಕು ಸೋಲಿಗ ಸಂಘದ ಅಧ್ಯಕ್ಷ ದೊಡ್ಡಸಿದ್ದಯ್ಯ ಕಾರ್ಯದರ್ಶಿ ರಂಗೇಗೌಡ ಯು.ವಿ. ಆರ್ ಪ್ರಾಜೆಕ್ಟ್ ವ್ಯವಸ್ಥಾಪಕ ನಾಗರಾಜು, ಮುಖಂಡರುಗಳಾದ ಶಿವಮೂರ್ತಿ, ಮಂಜೇಶ್,ಮುತ್ತುರಾಜು, ಅಮೀನ್ ಮತ್ತಿತರರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರ ತಾಲ್ಲೂಕಿನಲ್ಲಿ, ಚಾಮರಾಜನಗರ ಜಿಲ್ಲೆ.