ಕೆ.ಡಿ.ಪಿ ಸಭೆಯಲ್ಲಿ ಠರಾವು
ಆಲಮಟ್ಟಿ ಆಣೆಕಟ್ಟು ಎತ್ತರ ೫೨೪ಮೀ ಗೆ ಏರಿಸಿ- ಯಶವಂತರಾಯಗೌಡ
ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಮಹಾರಾಷ್ಟ್ರ ಕ್ಯಾತೆ : ಶಾಸಕ ಪಾಟೀಲ
ಇಂಡಿ : ಮಹಾರಾಷ್ಟçದವರು ಆಲಮಟ್ಟಿ ಆಣೆಕಟ್ಟು ಎತ್ತರವನ್ನು ೫೨೪ ಮೀ ಗೆ ಏರಿಸಲು ಕ್ಯಾತೆ ತೆಗೆಯುತ್ತಿದ್ದು ಎತ್ತರ ಏರಿಸಲು ಯಾವದೇ ತ್ಯಾಗಕ್ಕೂ ಸಿದ್ದ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಆಡಳಿತ ಸೌಧ ಸಬಾಭವನದಲ್ಲಿ ನಡೆದ ೨೦೨೫-೨೬ ನೇ ಸಾಲಿನ ತ್ರೆöÊಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಕುರಿತು ವಿಜಯಪುರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಲಾಗುವದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕರೆದು ಹೋಗಲಾಗುವದು ಎಂದರು.
ಟಾಯಿಮ್ ಬಾಂಡ ಮೂಲಕ ಹಣ ಸಂಗ್ರಹಿಸಿ ಇಲ್ಲವೆ ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ಬಚಾವತ ಐ ತೀರ್ಪಿನ ಪ್ರಕಾರ ಆಣೆಮಟ್ಟಿನ ಎತ್ತರ ೫೨೪ ಮೀ ಮಾಡಬೇಕು ಮತ್ತು ೭೩೪ ಟಿ ಎಂ ಸಿ ನೀರನ್ನು ಬಳಸಿಕೊಳ್ಳಬೇಕಾಗಿದೆ , ಮತ್ತು ಬ್ರಜೇಶ ಮಿಶ್ರಾ ತೀರ್ಪಿನ ನೀರಾವರಿ ಹಂಚಿಕೆಯ ಪ್ರಕಾರ ಬಿ ಸ್ಕೀಮೀನ ಯೋಜನೆಗಳಿಗೆ ಕಾನೂನು ಬದ್ದವಾಗಿ ನೀರು ಪಡೆಯಬೇಕಾದರೆ ಎತ್ತರ ೫೨೪ ಆಗಲೇ ಬೇಕು ಎಂದು ಉಲ್ಲೇಖಿಸಿದೆ.
ಇಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ ಏತ ನೀರಾವರಿ, ಇಂಡಿ ಬ್ರಾಂಚ್ ಕಾಲುವೆ ಮತ್ತು ರೇವಣ ಸಿದ್ದೇಶ್ವರ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಆಲಮಟ್ಟಿ ಆಣೆಕಟ್ಟಿನ ಎತ್ತರ ೫೨೪ ಆಗಬೇಕು ಎಂದರು.
ಆಲಮಟ್ಟಿ ಆಣೆಕಟ್ಟು ನೀರು ಸಂಗ್ರಹಕ್ಕೂ ಮಹಾರಾಷ್ಟçದಲ್ಲಿ ಪ್ರವಾಹ ಉಂಟಾಗುವದಕ್ಕೂ ಸಂಬಂದವೇ ಇಲ್ಲ ಎನ್ನುವದಕ್ಕೆ ವೈಜ್ಞಾನಿಕ ವರದಿ ಸಲ್ಲಿಕೆಯಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕಡಿಮೆ ಬಂದಿದ್ದು ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿ ಗಳು ಚಿಂತನೆ ಮಾಡಿ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸುವ ಕುರಿತು ಚರ್ಚೆ ನಡೆಯಿತು.
ತಾಲೂಕಿನಲ್ಲಿ ಮಳೆ ಯಾಗುತ್ತಿರುವ ಕುರಿತು ಮತ್ತು ಬೀಜ ಮತ್ತು ಗೊಬ್ಬರ ರೈತರಿಗೆ ವಿತರಣೆ ಮಾಡುವ ಕುರಿತು ಚರ್ಚಿಸಿದರು.
ಹೆಸ್ಕಾಂ ಎಇಇ ಎಸ್.ಆರ್. ಮೆಂಡೆದಾರ ಮಾತನಾಡಿ ತಾಲೂಕಿನಲ್ಲಿ ೧೫ ವಿದ್ಯುತ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮತ್ತೆ ನಾಲ್ಕು ವಿದ್ಯುತ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಕಳುಹಿಸಿದ್ದು ಮಂಜುರಾತಿ ದೊರೆತಿದೆ ಎಂದರು.
ಇಂಡಿಯ ರಸ್ತೆಗಳ ರಿಪೇರಿಗೆ ತಮ್ಮ ಅನುದಾನದಲ್ಲಿ ೫ ಕೋಟಿ ರೂ ತಿಳಿಸಿದರು. ಇಂಡಿಯಲ್ಲಿ ತಾಯಿ – ಮಗು ಆಸ್ಪತ್ರೆ ಪ್ರಾರಂಭಿಸುವ ಕುರಿತು ಮತ್ತು ಕುಡಿಯುವ ನೀರಿನ ಪ್ರದೇಶಗಳಿಗೆ ನೀರು ಪೂರೈಸುವ ಕುರಿತು ಚರ್ಚೆ ನಡೆಯಿತು.
ಹಕ್ಕು ಪತ್ರ ವಿತರಣೆಯಲ್ಲಿ ಕರ್ನಾಟಕದಲ್ಲಿ ರಾಜ್ಯಕ್ಕೆ ಇಂಡಿ ತಾಲೂಕು ಎರಡನೆಯ ಸ್ಥಾನದಲ್ಲಿದೆ ಎಂದ ಅವರು ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿಗಾಗಿ ಶೀಘ್ರ ಕ್ರಮ ಕೈಕೊಳ್ಳಲಾಗುವದು ಎಂದರು.
ಇAಡಿಯಲ್ಲಿ ಇನ್ನೊಂದು ಬಸ್ ನಿಲ್ದಾಣ ಪ್ರಾರಂಭಿಸುವ ಕುರಿತು ಮತ್ತು ತಾಲೂಕಿನಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಮತ್ತು ಅದಕ್ಕೆ ಬೇಕಾಗುವ ಹಣ ನೀಡುವದಾಗಿ ತಿಳಿಸಿದರು.
ಕೃಷಿ ಇಲಾಖೆಯ ಚಂದ್ರಕಾಂತ ಪವಾರ, ಮಹಾದೇವಪ್ಪ ಏವೂರ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಹೆಸ್ಕಾಂ ನ ಎಸ್.ಎಸ್. ಬಿರಾದಾರ, ಸಂಜಯ ಖಡಗೇಕರ ಮಾತನಾಡಿದರು.
ವೇದಿಕೆಯ ಮೇಲೆ ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ನಂದೀಪ ರಾಠೋಡ,ಡಿ.ಎಸ್.ಪಿ ಜಗದೀಶ, ನಾಮ ನಿರ್ದೇಶಿತ ಸದಸ್ಯರಾದ ಬಿ.ಕೆ.ಪಾಟೀಲ, ಗುರನಗೌಡ ಪಾಟೀಲ,ದೀಪಾಲಿ ಕುಲಕಣ ð,ಜೆ.ಎಂ.ಕರಜಗಿ,ಇಲಿಯಾಸ ಬೋರಾಮಣ , ಪ್ರಶಾಂತ ಕಾಳೆ ಮತ್ತಿತರಿದ್ದರು.
ಇಂಡಿ ಪಟ್ಟಣದ ಆಡಳಿತ ಸೌಧ ಸಬಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.




















