ವಿಜಯಪುರ : ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ್ ಹತ್ಯೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳು ಕೋರ್ಟ್ಗೆ ಶರಣಾಗಿದ್ದಾರೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದ ಎಸ್ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಮಾತನಾಡಿದ ಅವರು, ಈಗಾಗಲೇ 40 ಜನ ಆರೋಪಿಗಳ ಪೈಕಿ 38 ಜನರು ಬಂಧನವಾಗಿದೆ. ಇನ್ನು ಮಲ್ಲಿಕಾರ್ಜುನ ಚಡಚಣ ಹಾಗೂ ಸಿಂಗ್ನ್ನು ಆದಷ್ಟು ಬೇಗನೆ ಬಂಧನ ಮಾಡಲಾಗುವುದು ಎಂದರು. ಈಗಾಗಲೇ ಆರೋಪಿ ವಿಮಲಾಬಾಯಿ ಚಡಚಣ ಮೇಲೆ 8 ಕೇಸ್ಗಳಿವೆ. ಇದರ ತನಿಖೆ ಕೈಗೊಂಡು ಮಲ್ಲಿಕಾರ್ಜುನ ಚಡಚಣನ್ನು ಬಂಧನ ಮಾಡಲಾಗುವುದು ಎಂದರು.