ಇಂಡಿ : ಫೆಬ್ರವರಿ ೧, ೨೦೨೨ ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸುವ ಹಬ್ಬ . ಅದರಂತೆ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಮಡಿವಾಳ ಮಾಚಿ ದೇವರ ಜಯಂತಿ ಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಜೀವ ಕುಮಾರ್ ರೂಗಿ ಮಾತಾನಾಡಿದ ಅವರು, ಯಾರು ಈ ಮಾಚಿದೇವರು? ಮಡಿವಾಳ (ಅಗಸ) ಸಮುದಾಯಕ್ಕೆ ಏಕೆ ಇವರು ಸ್ಮರಣೀಯರು ಎಂಬುವುದರ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಹನ್ನೆರಡನೇ ಶತಮಾನದಲ್ಲಿ ಅಂದರೆ ಕ್ರಿ.ಶ.೧೧೨೦ ರಿಂದ ಕ್ರಿ.ಶ.೧೧೩೦ರ ನಡುವೆ ಮಾಚಯ್ಯ/ಮಾಚಿದೇವರು ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಹೆತ್ತವರು ಪರ್ವತಯ್ಯ ಹಾಗೂ ಸುಜ್ಞಾನಮ್ಮ. ಹಿಪ್ಪರಗಿಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ತುಂಬಿರಲು ಹೊಳೆಗೋಲ ಹಂಗಿಲ್ಲದೆ ಶಿವನನ್ನು ನೆನೆದಾಗ ನದಿಯು ಇಬ್ಭಾಗವಾಗಿ ದಾರಿ ತೋರಿತು. ಈ ಮಾರ್ಗದಿಂದ ಮಾಚಿದೇವನು ನಡೆದುಕೊಂಡು ಬರುತ್ತಾನಂತೆ ಎಂದು ಪ್ರತೀತವಿದೆ. ಅದರಂತೆ ಕಾಯಕ ಮಾಡದ ಸೋಮಾರಿಗಳಂತೆ ತಿರುಗಾಡಿಕೊಂಡಿದ್ದವರ, ಬಡವರನ್ನು ಶೋಷಿಸುವವರ ಬಟ್ಟೆಗಳನ್ನು ಯಾವತ್ತೂ ಮಾಚಯ್ಯ ಶುಚಿ ಮಾಡುತ್ತಿರಲಿಲ್ಲ. ದುರ್ಗಣಗಳನ್ನು ಬಿಟ್ಟು ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಪರಮೇಶ್ವರ ದಳವಾಯಿ, ಶಿವಾನಂದ ಮಡಿವಾಳ, ಪರಶುರಾಮ ಮಡಿವಾಳ, ಸಂಜು ಮಡಿವಾಳ, ಬೀರಣ್ಣ ಮಡಿವಾಳ, ಜಟ್ಟಪ್ಪ ಮಡಿವಾಳ, ಬನ್ನೆಪ್ಪ ಮಡಿವಾಳ, ಸಿದ್ದು ಮಡಿವಾಳ, ಸಿದ್ದು ತು ಮಡಿವಾಳ ಉಪಸ್ಥಿತರು.