ಮಡಿಕೇಶ್ವರ ಶುದ್ಧ ಕುಡಿಯುವ ನೀರಿನ ಘಟಕ ಬಂದ್||
ಶುದ್ಧ ನೀರಿನ ಘಟಕ ಸ್ಥಗಿತದಿಂದ ಗ್ರಾಮಸ್ಥರಿಗೆ ತೊಂದರೆ||
ಸ್ವಚ್ಛ ಭಾರತ ಅಭಿಯಾನ ಅನುದಾನದಲ್ಲಿ ನಿರ್ಮಾಣವಾದ ಕಸವೀಲೆವಾರಿ ಘಟಕಕ್ಕೆ ಸಂಪೂರ್ಣ ವಿಫಲ||
ಗ್ರಾಪಂ ಕಸದ ವಾಹನವಿದ್ದರೂ ಸಂಗ್ರಹವಾದ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕದೆ ಊರಿನ ಹಳ್ಳದಲ್ಲಿ ಚೆಲ್ಲಿದ್ದಾರೆ||
ವಿಶೇಷ ವರದಿ ಬಸವರಾಜ ಈ ಕುಂಬಾರ
ಮುದ್ದೇಬಿಹಾಳ ; ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ಜನರಿಗಾಗಿ ಶುದ್ದ ಕುಡಿಯುವ ನೀರಿನ ಬಂದ್ ಯಾಗಿದ್ದು
ಈ ಶುದ್ಧ ನೀರಿಗಾಗಿ ಲಿಂಗದಳ್ಳಿ, ವನಹಳ್ಳಿ, ನಡಹಳ್ಳಿ ಗಳಿಂದ ಜನರು ನೀರು ಒಯ್ಯುತ್ತಿದ್ದರು ಎಲ್ಲಾ ಗ್ರಾಮದ ಜನರಿಗೆ ಜೀವ ಸಲೆಯನ್ನು ನೀಡುತ್ತಿದ್ದ ಈ ಶುದ್ಧ ನೀರಿನ ಘಟಕ ಸ್ಥಗಿತಗೊಂಡು ನಾಲ್ಕು ವರ್ಷವಾದರೂ ಸಂಬಂಧಿಸಿದ ಗ್ರಾಪಂ ಅವರು ಇಲಾಖೆ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಭಂದವಿಲ್ಲದಂತೆ ಗಪ್ ಚುಪ್ ಆಗಿದ್ದಾರೆಎಂದು ಮಡಿಕೇಶ್ವರ ಗ್ರಾಮದ ತಾಲೂಕ ಡಿಎಸ್ ಎಸ್ ಸಂಚಾಲಕ ಶಾಂತಪ್ಪ ಚಲವಾದಿ ಸಮಸ್ಯೆಯನ್ನು ತಿಳಿಸಿದರು.
ಈ ಘಟಕವನ್ನು 2013 ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿ ಸರ್ಕಾರದ ಅವಧಿಯಲ್ಲಿ, ಶಾಸಕರಾದ ಸಿ.ಎಸ್ ನಾಡಗೌಡರ ಅವಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಡಿದ್ದರೂ ಪ್ರಯೋಜನ ವಾಗಿಲ್ಲ ಗ್ರಾಮಸ್ಥರು ಆರೋಪಿಸಿದರು.
ಮಡಿಕೇಶ್ವರ ಗ್ರಾಮದ ಹೊರವಲಯದ ಘನ ತಾಜ್ಯ ಘಟಕವನ್ನು ಮಾಡಲಾಗಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಅನುದಾನದಲ್ಲಿ ನಿರ್ಮಾಣವಾದ ಈ ಕಸವೀಲೆವಾರಿ ಘಟಕಕ್ಕೆ ಸರಿಯಾದ ದಾರಿ ಇಲ್ಲ ಮತ್ತು ಗ್ರಾಪಂ ಕಸದ ವಾಹನವಿದ್ದರೂ ಸಂಗ್ರಹವಾದ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕದೆ ಊರಿನ ಹಳ್ಳದಲ್ಲಿ ಚೆಲ್ಲಿದ್ದಾರೆ ಸ್ವಚ್ಚತೆಗೆ ಆದ್ಯತೆ ನೀಡಬೇಕಾದವರೆ ಹೀಗೆ ಮಾಡಿದರೆ ಹೇಗೆ ಎಂದು ಗ್ರಾಮದ ಮುಖಂಡ ಬಸನಗೌಡ ಪಾಟೀಲ್ ಪ್ರಶ್ನಿಸಿಸುತ್ತಾರೆ.
ಮಡಿಕೇಶ್ವರ ಗ್ರಾಪಂ ಕಾರ್ಯಾಲಯದಲ್ಲಿ ಕಸ ವಿಲೇವಾರಿ ಮಾಡುವ ವಾಹನ ಅನಾರೋಗ್ಯ ಪಿಡಿತವಾಗಿ ನಿಂತಿದ್ದರೆ ಗ್ರಾಪಂ ಕಾರ್ಯಾಲಯದ ಕಟ್ಟ ದೊಳಗೆ ಕಸ ಹಾಗೂ ಗುಟ್ಕಾ ತಿಂದು ಉಗುಳಿದ ಗುರುತು ಕಾಣಸಿಗುತ್ತವೆ ಇದು ಮಡಿಕೇಶ್ವರ ಗ್ರಾಪಂ ಸ್ವಚ್ಚತೆಗೆ ನೀಡಿರುವ ಆದ್ಯತೆಯಾಗಿದೆ ಗ್ರಾಮದ ಜನರ ಸಮಸ್ಯೆ ಆಲಿಸಲು ಪಿಡಿಒ ಅವರು ಸಿಗುವುದಿಲ್ಲ ಅಧ್ಯಕ್ಷರಾದವರು ಅವರವರ ಕೆಲಸದಲ್ಲಿ ಬ್ಯೂಸಿಯಾದರೆ ಚುಣಾಯಿಸಿದ ಜನರ ಸಮಸ್ಯೆ ಆಲಿಸುವರಾರು? ಎಂಬ ಪ್ರಶ್ನೆ ಜನರದ್ದಾಗಿದೆ.
ನಮ್ಮ ಜನರು ವಾಸಿಸುವ ಬಡಾವಣೆ ಜನರಿಗೆ ಈ ಶುದ್ಧ ನೀರಿನ ಘಟಕ ಅಮೃತವಾಗಿತ್ತು ಕಳೆದ 4 ವರ್ಷದಿಂದ ಬಂದ್ ಆಗಿದೆ ಇನ್ನೂ ರಿಪೇರಿ ಮಾಡಿಲ್ಲ ನಾವು ವಾಸಿಸುವ ಕೇರಿಗೆ ಶುದ್ಧೀಕರಣ ಮಾಡದ ನೀರನ್ನು ನೇರವಾಗಿ ಬಿಡುತ್ತಾರೆ ಸಂಗ್ರಹಿಸಿದ ನೀರನಲ್ಲಿ ಎಣ್ಣೆಂಶ ತೇಲುತ್ತದೆ ಅಂತಹ ನೀರಿನ ಸೇವನೆ ಇಂದ ನಮ್ಮ ಮೊಣಕಾಲು ಹಿಡಿದಿವೆ ನಮ್ಮ ಸಮಸ್ಯೆ ಆಲಿಸುವರಿಲ್ಲ.
ಶಾಂತಪ್ಪ ಚಲವಾದಿ ಮಡಿಕೇಶ್ವರ ಗ್ರಾಮದ( ದಲಿತ ಮುಖಂಡ)
ಗ್ರಾಮದಲ್ಲಿ ಸಂಗ್ರಹಿಸಿ ಕಸವನ್ನು ವಿಲೇವಾರಿ ಘಟಕದಲ್ಲಿ ಹಾಕಬೇಕು ಅದನ್ನು ಬಿಟ್ಟು ಊರಿನ ಹಳ್ಳದಲ್ಲಿ ಸುರಿಯಲಾಗಿದೆ ಊರನ್ನು ಸ್ವಚ್ಚತೆ ಮಾಡುವವರೆ ಹೀಗೆ ಮಾಡಿದರೆ ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು? ಇರುವ ಕಸವಿಲೇವಾರಿ ಘಟಕ್ಕೆ ಸರಿಯಾದ ರಸ್ತೆ ಸಂಪರ್ಕ ಇಲ್ಲ ಸರಕಾರದ ಲಕ್ಷಾಂತರ ರೂ ಹಣ ವ್ಯರ್ಥವಾಗಿದೆ.