ಭಾರತದ ಹಸಿರು ಕ್ರಾಂತಿ ಪಿತಾಮಹ ಎಮ್ ಎಸ್ ಸ್ವಾಮಿನಾಥನ್ ಇನ್ನಿಲ.
ಬೆಂಗಳೂರು VOJ- DESK : ಭಾರತದ ಹಸಿರು ಕ್ರಾಂತಿ ಪಿತಾಮಹ ಎಂದೆ ಪ್ರಖ್ಯಾತರಾದ್ ಡಾ. ಎಮ್ ಸ್ವಾಮಿನಾಥನ್ ಗುರುವಾರ ಸಾವನ್ನಪ್ಪಿದ್ದಾರೆ.
ಜಗತ್ತು ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ ಡಾ. ಮೊಂಕೊಂಬ್ ಸಾಂಬಶಿವನ್ ಸ್ವಾಮಿಶಿವನ್ ಚೆನೈನಲ್ಲಿ ನಿಧಾನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಸ್ವಾಮಿನಾಥನ್ ಅವರು ರೈತರ ಆದಾಯ ದ್ವಿಗುಣ ಬೆಸಾಯದತ್ತ್ ಯುವಕರನ್ನು ಸೆಳೆಯುವುದು, ಶೂನ್ಯ ಬಂಡವಾಳ ಕೃಷಿ, ಭವಿಷ್ಯದ ಬೇಸಾಯದ ಪದ್ದತಿ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ವರ್ಷ ಸ್ವಾಮಿನಾಥನ್ ಅವರ ಪತ್ನಿ ನಿಧನರಾಗಿದ್ದರು. ಅವರಿಗೆ ಮೂವರು ಪುತ್ರಿಯರು ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್, ನಿತ್ಯಾ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ. ಇನ್ನೂ ರಾಜ್ಯ, ರಾಷ್ಟ್ರ ನಾಯಕರು ಸಂತಾಪ ಸೂಚಿಸಿದ್ದಾರೆ.