ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿರುವ ಎಂ ಗಂಗಣ್ಣ ಸ್ಮಾರಕ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಕೋರೋನಾ ಸ್ಪೋಟಗೊಂಡಿದ್ದು, ಸದ್ಯ ವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತವು ರಜೆ ಘೋಷಣೆ ಮಾಡಲಾಗಿದೆ. ಕೊರೋನಾ, ಒಮಿಕ್ರಾನ್ ದಿನದಿಂದ ದಿನಕ್ಕೆ ಹಾವಳಿ ಹೆಚ್ಚಾಗುತ್ತಿದೆ. ವಿದ್ಯಾಲಯದ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿದ್ದು ತಿಳಿದು ಬಂದಿದೆ. ಶಾಲೆಯಲ್ಲಿ ಒಟ್ಟು ೨೧೬ ವಿದ್ಯಾರ್ಥಿಗಳು ಇದ್ದು, ಅದರಲ್ಲಿ ೧೫೦ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ಸ್ಕ್ವಾಬ್ ಟೆಸ್ಟ ಮಾಡಲಾಗಿತ್ತು. ಅದರಲ್ಲಿ ೧೩ ಮಕ್ಕಳು 2 ಜನ ಸಿಬ್ಬಂದಿಗೆ ಸೋಂಕು ತಗುಲಿದೆ. ಒಟ್ಟಾರೆ ವಿದ್ಯಾಲಯದ ೧೫ ಜನರಿಗೆ ಕೋವಿಡ್ ಪತ್ತೆಯಾಗಿದೆ. ಇದರಿಂದಾಗಿ ಮಹಾವಿದ್ಯಾಲಯಕ್ಕೆ ದಿನಾಂಕ ೨೭ ರಿಂದ ೨೯ ರವರೆಗೆ ರಜೆ ಘೋಷಣೆ ಮಾಡಲಾಗಿದೆ.