ಸಿಂದಗಿ:ನಾಡಿನ ಜನತೆಯ ನೆಮ್ಮದಿ ಹಾಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರದಲ್ಲಿ ಎಂಇಎಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣರ ಮೂರ್ತಿಗೆ ಅಪಮಾನ ಮಾಡಿದ್ದಾರೆ ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಕುರುಬರ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿದರು.
ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಡೀ ಸರ್ಕಾರ ಅಲ್ಲಿರುತ್ತದೆ. ಕಾರಣ ಸರ್ಕಾರ ಅಸ್ತಿರಗೊಳಿಸಲು ಎಂಇಎಸ್ ಕಾರ್ಯಕರ್ತರು ಈ ದುಷಕೃತ್ಯ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಸದಾ ಬೆಳಗಾವಿ ವಿಷಯದಲ್ಲಿ ಒಂದಿಲ್ಲ ಒಂದು ಖ್ಯಾತೆ ತೆಗೆದು ಸರ್ಕಾರವನ್ನು ಸಹ ದೂಷಿಸುವ ಮಟ್ಟಕ್ಕೆ ಬೆಳೆದು ನಿಂತಿರುವ ನಾಡ ದ್ರೋಹಿ ಎಂಇಎಸ್ ಪುಂಡರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.