ಭೀಮಾತೀರದಲ್ಲಿ ಲೋಕಾಯುಕ್ತ ಪೋಲಿಸ್ ದಾಳಿ..! ಬಲೆಗೆ ಬಿದ್ದಿದ್ದು ಯಾರು ಗೊತ್ತಾ..?
ಚಡಚಣ : ಲಂಚ ಸ್ವೀಕರಿಸುವಾಗ ಲೋಕಾಯಿಕ್ತ ಅಧಿಕಾರಿಗಳು ದಾಳಿಗೈದು, ಪೊಲೀಸನೋರ್ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸಿಪಿಐ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ ಕಾನ್ಸ್ಟೇಬಲ್ ಸಂಜೀವಕುಮಾರ ಹೂಗಾರ ಲೋಕಾಯುಕ್ತ ಬಲೆ ಬಿದಿದ್ದಾನೆ. ದೂರುದಾರ ಸಂಬಂಧಿಕರ ಹೊಲದಲ್ಲಿ ಹಳೆ ಬಾವಿ ದುರಸ್ತಿಗೆ ಕಾಂಪೋಶನ ಹಾಗೂ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದು, ಬ್ಲಾಸ್ಟಿಂಗ್ ಡ್ರಿಲ್ ವಾಹನ ಹಚ್ಚಿದ ಕಾರಣಕ್ಕೆ ಲೈಸನ್ಸ್ ಇಲ್ಲದೆ ನಡೆಸುತ್ತಿರುವುದಾಗಿ ಹೇಳಿ ಪೊಲೀಸ ಕಾನ್ಸ್ಟೇಬಲ್ ಹೂಗಾರ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟು 30 ಸಾವಿರ ಲಂಚ ಸ್ವೀಕರಿಸಿದ್ದಾನೆ. ತದನಂತರ ಉಳಿದ 20 ಸಾವಿರ ಹಣವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿಗೈದು ನಗದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸ ಉಪಾಧೀಕ್ಷಕ ಸುರೇಶ ರಡ್ಡಿ ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಉಪಸ್ಥಿತರಿದ್ದರು.