ಗುಮ್ಮಟ ನಗರಿಯಲ್ಲಿ ಲೋಕಾಯುಕ್ತ ಬಲೆಗೆ ಸರ್ವೇರ್..!
ವಿಜಯಪುರ: ನಗರದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಸರ್ವೆಯರ್ ಹಾಗೂ ಖಾಸಗಿ ವ್ಯಕ್ತಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಜಮೀನಿನ ತಾತ್ಕಾಲಿಕ ಪೋಡಿ ಮಾಡಲು 47,500 ಲಂಚ ಕೇಳಿದ್ದ ಸರ್ವೆಯರ್ ಮಲ್ಲಪ್ಪ ಜಂಬಗಿ, ಖಾಸಗಿ ಸಹಾಯಕ ಗುರುದತ್ತ ಬಿರಾದಾರ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ನಾಲ್ಕು ಎಕರೆ ಜಮೀನಿನ ತತ್ಕಾಲ್ ಪೋಡಿ ಮಾಡಲು ಪ್ರಕಾಶ್ ಸಿಂಗೆ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿಗೈದು 47,500 ನಗದು ಹಣ ವಶಪಡಿಸಿಕೊಂಡು ಸರ್ವೇಯರ್ ಮಲ್ಲಪ್ಪ ಹಾಗೂ ಸಹಾಯಕ ಗುರುದತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.