ಲೋಕಸಭೆ ಫಲಿತಾಂಶ ತಾಂಬಾದಲ್ಲಿ ವಿಜಯೋತ್ಸವ : ಅಭಿವೃದ್ಧಿಗೆ ಸಾಕ್ಷಿ ಈ ಗೆಲವು ಕೆಂಗನಾಳ
ಇಂಡಿ : ಸಾರ್ವತ್ರಿಕ ಲೋಕಸಭೆ ಚುನಾವಣೆ 2024ರ ಈ ಫಲಿತಾಂಶ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಹಾಗೂ ಯಾವದೇ ಚುನಾವಣೆ ವಿಷಯದ ಗಾಳಿ ಇಲ್ಲದೆ ನಡೆದ ಚೊಕ್ಕ ಚುನಾವಣೆಯಾಗಿದೆ, ಈ ಗೆಲವು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ಪ್ರತೀಕ ಮತ್ತು ಸಂಸದ ರಮೇಶ್ ಜಿಗಜಿಣಗಿ ಅವರ ಸತತ ಹ್ಯಾಟ್ರಿಕ್ ಗೆಲವು ಅವರ ಸರಳತೆಗೆ ಕೈಗನ್ನಡಿಯಾಗಿದೆ, ಈ ಅಭುತ ಪೂರ್ವ ಗೆಲುವಿಗೆ ಕಾರಣರಾದ ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಾಂಬಾ ಪಟ್ಟಣದ ಸಂಗನಬಸವ ವೃತ್ತದಲ್ಲಿ ಬಿಜೆಪಿ ವಿಜಯೋತ್ಸವ ಆಚರಣೆ ಮಾಡಿ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಬಿಜೆಪಿ ಹಿರಿಯ ಮುಖಂಡರು ಜಿ ವಾಯ್ ಗೊರನಾಳ, ಮಾಜಿ ತಾಲೂಕು ಪಂಚಾಯತ ಸದಸ್ಯ ಪ್ರಕಾಶ ಮುಂಜಿ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜು ಗಂಗನಳ್ಳಿ, ಶಂಕರ್ ಯಳಕೋಟಿ, ಹೊನ್ನಪ್ಪ ಕಳ್ಳಿ, ಚಂದ್ರಶೇಖರ ರೊಟ್ಟಿ, ಬಸವರಾಜ ಸರಸಂಬಿ, ನಿಂಗಪ್ಪ ನಿಂಬಾಳ, ರುದ್ರಪ್ಪ ನಾವದಗಿ, ರಾಯಗೊಂಡ ಸಿಂದಗಿ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಭಾಗವಸಿದ್ದರು.