ಇಂಡಿಯಲ್ಲಿ ಶಾಂತಿಯುತ ಮತದಾನ..! ಶೇ 66.10 ಮತದಾನ..! ಎಸಿ ಅಬೀದ್ ಗದ್ಯಾಳ
ಇಂಡಿ :ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಉತ್ಸವ ಇಂಡಿಯಲ್ಲಿ ಅತೀ ಶಾಂತಿಯುತವಾಗಿ ನಡೆಯಿತು. ಹೌದು ಮಂಗಳವಾರ ನಡೆದ 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂಡಿಯ ಮತದಾರರು ಶೇ 66.10 ಮತದಾನ ಮಾಡುವ ಮೂಲಕ 8 ಅಭ್ಯರ್ಥಿಗಳ ಭವಿಷ್ಯ ಇವಿಎಮ್ ಪೆಟ್ಟಿಗೆಯಲ್ಲಿ ಭದ್ರ ಮಾಡಿದ್ದಾರೆ.
ಮಂಗಳವಾರ ನಡೆದ ಭಾರತದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮೇ 7 ರಂದು, ಬೆಳಗ್ಗೆ 7 ರಿಂದ ಸಂಜೆ 6 ರ ತನಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ತಾಲ್ಲೂಕಿನಲ್ಲಿ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ.
ಆದರೆ ಗ್ರಾಮೀಣ ಭಾಗದ ಮತದಾರರು ಮತಗಟ್ಟೆಗೆ ಉತ್ಸಾಹದಿಂದ ಬಂದು ಮತ ಚಲಾಯಿಸಿದರು. ಕೆಲವೆಡೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಸಿಲಿನ ತಾಪಮಾನದಿಂದ ಹೆಚ್ಚಿರುವ ಕಡೆಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಹೋಬಳಿಯಲ್ಲಿ ಶೇ 50ರಷ್ಟು ಮತದಾನ ಆಗಿರುವುದಾಗಿ ಮೂಲಗಳು ತಿಳಿಸಿವೆ. ಪ್ರಥಮ ಬಾರಿಗೆ ಮತದಾನ ಮಾಡುವ ಯುವಕರು ಅತ್ಯಂತ ಉತ್ಸಾಹದಲ್ಲಿ ಮತದಾನ ಮಾಡಿದರು. ಇನ್ನೂ ಮಠಾದೀಶರು, ಸ್ಥಳೀಯ ರಾಜಕಾರಣಿಗಳು ಹಾಗೂ ವ್ಯಾಪಾರಸ್ಥರು ಮತದಾನ ಮಾಡಿದರು.
ಇಂಡಿ ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್