LOKASABHA ASSEMBLY ELECTION 2024
Political NEWS : ಬಾಗಲಕೋಟೆ: ಎರಡು ದಶಕದಿಂದ ಬಾಗಲಕೋಟೆ ಅಭಿವೃದ್ಧಿ ಬಗ್ಗೆ ಸಂಸತ್ನಲ್ಲಿ ಧ್ವನಿ ಕೇಳಿಲ್ಲ. ನನಗೆ ಅವಕಾಶ ಮಾಡಿಕೊಟ್ಟರೆ ಇಲ್ಲಿನ ಜನರ ಧ್ವನಿಯಾಗುತ್ತೇನೆ ” ಎಂದು ಲೋಕಸಭೆ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ, ಸಂಸದ ಗದ್ದಿಗೌಡರ ಅವರನ್ನು ಉದ್ದೇಶಿಸಿ, ಹಳೆಯ ಹುಲಿ ಯಾವಾಗಲಾದ್ರೂ ರಿಟೈರ್ ಆಗಬೇಕು, ಹೊಸ ಹುಲಿ ಚಾರ್ಜ್ ತಗೋಬೇಕು” ಹಳೆಯ ಹುಲಿ ಹೊಸ ಹುಲಿಗೆ ದಾರಿ ಮಾಡಿಕೊಡಬೇಕು ಎನ್ನುವುದು ಸೃಷ್ಟಿಯ ನಿಯಮ. ಬಾಗಲಕೋಟೆಯಲ್ಲಿ ಇದು ಸಾಧ್ಯವಾಗಲಿದೆ. ಕ್ಷೇತ್ರ ರಾಮರಾಜ್ಯವಾಗಬೇಕು ಎಂದರೆ ಎಲ್ಲರೂ ಬೆಂಬಲಿಸಬೇಕು. ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದರು.