ಪಿಆರ್‍ಓ ಮತ್ತು ಎಪಿಆರ್‍ಓ ಗಳಿಗೆ ತರಬೇತಿ
ಚುನಾವಣೆ ಮಾರ್ಗಸೂಚಿ ಪಾಲಿಸಿ
ಇಂಡಿ : ಚುನಾವಣೆ ಆಯೋಗದ ಮಾರ್ಗಸೂಚಿಯ
ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ
ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಆದರ್ಶ ಪ್ರೌಢಶಾಲೆಯಲ್ಲಿ ಲೋಕಸಭಾ
ಚುನಾವಣೆ ಹಿನ್ನೆಲೆ ಎಲ್ಲ ಪಿಆರ್‍ಒ ಮತ್ತು ಎಪಿಆರ್‍ಓ
ಇವರಿಗೆ ಚುನಾವಣೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಾಕ ಪೋಲ, ಅದರ ಕಾರ್ಯ ವಿಧಾನ, ಮತ್ತು ನಿಜವಾದ ಮತದಾನದ ಆರಂಭದ ಬಗ್ಗೆ ತಿಳಿಸಿದರು.
ಚುನಾವಣೆ ಪೂರ್ವ ಹೋದ ನಂತರ ಮಾಡುವ ಕಾಗದಗಳ ಮತ್ತು ವಿವಿಧ ನಮೂನೆ ಕಾಗದದ ಎಲ್ಲ ವಿವರ ಮತ್ತು ಇವಿಎಮ್, ವಿವಿಪ್ಯಾಡ ಕುರಿತು ಮಾಹಿತಿ
ನೀಡಿದರು. ಅದರಂತೆ 19 ಜನ ಮಾಸ್ಟರ್ ಟ್ರೇನರ್ಸ
ತರಬೇತಿದಾರರು ವಿವಿಧ ಕೋಣೆಗಳಲ್ಲಿ ಚುನಾವಣೆ ನಡೆಸುವ ಕುರಿತು ವಿವರವಾದ ಮಾಹಿತಿ ನೀಡಿದರು.
ತರಬೇತಿಯಲ್ಲಿ 379 ಪಿಆರ್‍ಒ ಮತ್ತು 554 ಎಪಿಆರ್‍ಒ
ಭಾಗವಿಹಿಸಿ ಚುನಾವಣೆ ತರಬೇತಿ ಪಡೆದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವಪ್ಪ ಮುರಗಿ, ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ, ರವಿ ಮಡಿವಾಳರ, ಕೆವಿಕೆ ಮುಖ್ಯಸ್ಥ ಶಿವಶಂಕರಮೂರ್ತಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ , ಶಿರಸ್ತೆದಾರ ಬಸವರಾಜ ರಾವೂರ ಉಪಸ್ಥಿತರಿದ್ದರು.
ಇಂಡಿ ಪಟ್ಟಣದ ಆದರ್ಶ ಪ್ರೌಢಶಾಲೆಯಲ್ಲಿ
ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲ ಪಿಆರ್‍ಒ
ಮತ್ತು ಎಪಿಆರ್‍ಓ ಇವರಿಗೆ ಚುನಾವಣೆ ತರಬೇತಿ
ನೀಡುವ ಕಾರ್ಯಕ್ರಮದಲ್ಲಿ ಎಸಿ ಅಬೀದ್ ಗದ್ಯಾಳ
ಮಾತನಾಡಿದರು.
ಯುಗ ಯುಗ ಕಳೆದರೂ ಮರಳಿ ಬರುವ ಯುಗಾದಿ ಭೂಮಿಗೆಲ್ಲ ಮುದ ನೀಡುವ, ಒಣಗಿದ ಮರಗಿಡಗಳಿಗೆಲ್ಲ ಹೊಸ ಚಿಗುರು,ಹೊಸ ಹುಮ್ಮಸ್ಸು ನೀಡುವ ನಿಸರ್ಗ ನಮ್ಮೆಲ್ಲರ ಬಾಳಿನಲ್ಲಿಯ ಕಹಿಯನ್ನೆಲ್ಲ ಕಳೆದು ಸಿಹಿಯನ್ನು ನೀಡಲಿ.
ಸುಖ,ಸಂತೋಷ, ಆಸೆಗಳೆಲ್ಲ ಚಿಗುರಿ ಹೆಮ್ಮರವಾಗಲಿ.
ಮರಳಿ ಬಂದಿದೆ ಯುಗಾದಿ ತಂದಿದೆ ಹೊಸ ವರುಷದ ಆದಿ ತೋರಲಿ ಹೊಸ ವರುಷಕ್ಕೆ ಹಾದಿ ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ ಯುಗಾದಿ.
ಯುಗಾದಿ ಹಬ್ಬದ ಶುಭಾಶಯಗಳು
Editor : ಶಂಕರಲಿಂಗ ಜಮಾದಾರ, ವೈಸ್ ಆಫ್ ಜನತಾ
MoB :9972400321/8618981392
🌹🌹💐🙏🏻🙏🏻💐🌹🌹