ಹಾಲುಮತದ ನಡಿಗೆ ಸಿದ್ದರಾಮಯ್ಯನ ಕಡೆಗೆ : ಜೆಟ್ಟಪ್ಪ ರವಳಿ
ಇಂಡಿ : ಭಾರತೀಯ ಜನತಾ ಪಕ್ಷದಿಂದ ಹಾಲುಮತ ಸಮುದಾಯಕ್ಕೆ ಸಿಕ್ಕಿದ್ದು ಏನು..? ರಾಜ್ಯದಲ್ಲಿ ನಿರ್ಣಾಯಕ ಮತ ಹೊಂದಿರುವ ಹಾಲುಮತ ಸಮುದಾಯಕ್ಕೆ ರಾಜ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಅವಕಾಶ ನೀಡಿಲ್ಲ. ಇನ್ನೂ ಚಡ್ಡಿ ಹಾಕಿ ಬಿಜೆಪಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದ ನಮ್ಮ ಸಮುದಾಯದ ನಾಯಕ ಕೆ. ಎಸ್ ಈಶ್ವರಪ್ಪರನ್ನು ವಿಧಾನ ಸಭೆಯಲ್ಲೂ ಟಿಕೆಟ್ ನೀಡದೆ, ಲೋಕಸಭೆಯಲ್ಲೂ ಟಿಕೆಟ್ ನೀಡದೆ, ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದು, ಹಾಲುಮತ ಸಮಾಜ ಖಂಡಿಸುತ್ತದೆ. ಹಾಗಾಗಿ ಬಿಜೆಪಿ ಪಕ್ಷಕ್ಕೆ ಹಾಲುಮತ ಸಮುದಾಯದಿಂದ ಒಂದೇ ಒಂದು ಮತ ನೀಡಬಾರದು ಎಂದು ಹಾಲುಮತ ಸಮಾಜದ ತಾಲ್ಲೂಕು ಅಧ್ಯಕ್ಷ ಜೆಟ್ಟಪ್ಪ ರವಳಿ ಹೇಳಿದರು.
ಬುಧವಾರ ಪಟ್ಟಣದ ಖಾಸಗಿ ಹೊಟೆಲ್ ಯೊಂದರಲ್ಲಿ ಕರೆದ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲುಮತದ ನಡೆ ಸಿದ್ದರಾಮಯ್ಯ ಕಡೆ ಎಂದು ಹೇಳಿದರು. ಕಾಂಗ್ರೆಸ್ ಹಾಲುಮತ ಸಮುದಾಯಕ್ಕೆ ಮುಖ್ಯ ಮಂತ್ರಿ ಭಾಗ್ಯ ಕೊಟ್ಟಿದೆ. ಒಂದು ಬಾರಿ ಅಲ್ಲಾ ಎರಡನೇ ಬಾರಿ ಅವಕಾಶ ಕೊಟ್ಟಿದೆ. ಆದರೆ ಬಿಜೆಪಿ ಪಕ್ಷದಿಂದ ಸಿಕ್ಕಿದ್ದು ಸುಳ್ಳು ಭರವಸೆ, ಮೋಸ ಹಾಗೂ ಕೋಮುವಾದ, ಇವರ ಕೊಡುಗೆ ಶೂನ್ಯ ಎಂದು ಕಿಡಿಕಾರಿದರು.
ಇನ್ನೂ ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಗುರನಗೌಡ ಪಾಟೀಲ, ಬಿಸೆ ಸಾಹುಕಾರ್, ತುಕರಾಮ ಪೂಜಾರಿ ಮಾತನಾಡಿದ ಅವರು, 135 ಕೋಟಿ ಜನರ ಆಶೋತ್ತರಗಳಿಗೆ ಕಾಂಗ್ರೆಸ್ ಪಕ್ಷ ಅತ್ಯಂತ ಮಹತ್ವದಾಗಿದ್ದೆ. ಅದಲ್ಲದೇ ಗ್ಯಾರೆಂಟಿ ಸರಕಾರದ ಸರದಾರ ಸಿದ್ದರಾಮಯ್ಯ, ಸಾಮಾಜಿಕ ಅಡಿಯಲ್ಲಿ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷವಿದೆ. ಆದರೆ ರಾಜಕೀಯ ಷಡ್ಯಯಂತ್ರದಿಂದ ಹಾಲುಮತ ಸಮುದಾಯಕ್ಕೆ ಮೂಲೆಗುಂಪು ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ರಾಜ್ಯಾದಾದ್ಯಂತ ಹಾಲುಮತ ಸಮುದಾಯ ಒಂದೇ ಒಂದು ಮತ ಕೊಡದೇ ಒಳ್ಳೆಯ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷ ಬಸವರಾಜ ಕಿವಡೆ, ಮಲ್ಲು, ಗ್ರಾ.ಪಂ ಮಾಜಿ ಅಧ್ಯಕ್ಷ ಭೀರಪ್ಪ ಪೂಜಾರಿ, ಅವಿನಾಶ್ ಬಗಲಿ ಹಾಗೂ ಇನ್ನೂ ಅನೇಕ ಮುಖಂಡರು ಹಾಗೂ ಸಮುದಾಯದ ನೂರಾರು ಸಂಖ್ಯೆ ಉಪಸ್ಥಿತರಿದ್ದರು.